ಮೈಸೂರು: ಮೈಸೂರು ಸಮಗ್ರ ಅಭಿವೃದ್ಧಿ ಸಭೆ ಮುಗಿಸಿ ಹೊರಬಂದ ಸಚಿವ ಹೆಚ್.ಸಿ ಮಹದೇವಪ್ಪ ಅವರು ಮೂರು ಕ್ಷೇತ್ರಗಳ ಉಪ ಚುನಾವಣಾ ಗೆಲುವಿನ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಜನ ಸರಿಯಾದ ತೀರ್ಪನ್ನು ಕೊಟ್ಟಿದ್ದು, ಜನರ ಆ ತೀರ್ಪು ನಾವು ಗೌರವಿಸಬೇಕು ಎಂದಿದ್ದಾರೆ.
ಅಲ್ಲದೆ, ಕಾಂಗ್ರೆಸ್ ಸರ್ಕಾರದ ಜನಪರ ಯೋಜನೆಗಳು ನಮ್ಮ ಪಕ್ಷದ ಕೈ ಹಿಡಿದಿವೆ. ಸಿದ್ದರಾಮಯ್ಯ ಅವರು ಒಬ್ಬ ಪ್ರಾಮಾಣಿಕ ವ್ಯಕ್ತಿ ಎಂಬುವುದನ್ನು ಜನ ನಂಬಿಕೆ ಇಟ್ಟು ಅವರ ಕೈ ಮತ್ತಷ್ಟು ಬಲ ಪಡಿಸಿದ್ದಾರೆ. ಮತದಾರರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದು ಆಪ್ತ ಸಿದ್ದರಾಮಯ್ಯ ಅವರನ್ನ ಹಾಡಿ ಹೊಗಳಿದ್ದಾರೆ.
PublicNext
24/11/2024 08:45 am