ಮೈಸೂರು: ಹೆಚ್.ಡಿ.ಕೋಟೆ ತಾಲ್ಲೂಕಿನ ಡಿ.ಬಿ.ಕುಪ್ಪೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಗೋಳೂರು ಹಾಡಿಗೆ ಇಂದು ರಾಜ್ಯ ಎಸ್ಸಿ- ಎಸ್ಟಿ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ ಭೇಟಿ ನೀಡಿದ್ದಾರೆ. ಹಾಡಿಯಲ್ಲಿ ಜೇನುಕುರುಬ 77, ಹೆರವ 31 ಸೇರಿ 125 ಕುಟುಂಬಗಳಿಂದ, 508 ಮಂದಿ ವಾಸವಿದ್ದು, ಶಾಲೆ ಮತ್ತು ಅಂಗನವಾಡಿಗೆ ಮಕ್ಕಳ ಬರುತ್ತಿರುವ ಬಗ್ಗೆ ಮಾಹಿತಿ ಕಲೆ ಹಾಕಿದರು.
ಅಲ್ಲದೆ ಹೆಣ್ಣು ಮಕ್ಕಳು ಕೊಡಗು, ಕೇರಳ ಕಡೆಗೆ ಕೂಲಿ ಕೆಲಸಕ್ಕೆ ಹೋಗುತ್ತಿದ್ದು, ಆರ್ಥಿಕ ಸ್ಥಿತಿ-ಗತಿಯ ಬಗ್ಗೆ ಮಾಹಿತಿ ಕಲೆ ಹಾಕಿದರು. ಹಾಡಿಯಲ್ಲಿರುವ ಮನೆಗಳಲ್ಲಿ ಸುಮಾರು 51 ಮನೆಗಳಿಗಷ್ಟೇ ಹಕ್ಕು ಪತ್ರ ವಿತರಣೆಯಾಗಿದ್ದು, ಉಳಿದ ಮನೆಗಳಿಗೆ ಹಕ್ಕು ನೀಡಬೇಕೆಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
PublicNext
03/12/2024 10:02 pm