ನಂಜನಗೂಡು : ದಿನಗಳು ಉರುಳುತ್ತಿವೆ ಹಂಗೋ ಹಿಂಗೋ ಬದುಕು ಸಾಗುತ್ತದೆ ಮೂರ್ನಾಲ್ಕು ತಲೆಮಾರುಗಳಿಂದ ವಾಸಿಸಿ ಮಳೆ ಬಂದರೆ ಸೋರುವ ಗುಡಿಸಲು ವಾಸದ ಮನೆಗಾಗಿ ಎಷ್ಟೇ ಪರಿತಪ್ಪಿಸಿದರು ನಮ್ಮ ನೋವಿಗೆ ಮತ್ತು ಸಂಕಷ್ಟಕ್ಕೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಮನಸ್ಸು ಕುಗ್ಗುವುದಿಲ್ಲ. ಆದರೆ, ನಂಜನಗೂಡಿನ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಸ್ಥೆಯ ಸಿಬ್ಬಂದಿಗಳು ಮತ್ತು ನೌಕರರು ಮಾಡಿರುವ ಉತ್ತಮ ಕಾರ್ಯವೈಕರಿಗೆ ತಾಲ್ಲೂಕಿನ ಜನರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣ ವಿಧಾನಸಭಾ ಕ್ಷೇತ್ರದ ನಂಜನಗೂಡು ತಾಲ್ಲೂಕಿನ ತಗಡೂರು ಗ್ರಾಮದ ಗೌರಮ್ಮ ಎಂಬುವರಿಗೆ ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ವತಿಯಿಂದ ವಾತ್ಸಲ್ಯ ಯೋಜನೆಯಡಿಯಲ್ಲಿ ಮನೆಯನ್ನು ನಿರ್ಮಾಣ ಮಾಡಿಕೊಡಲಾಗಿದೆ.
ಮನೆ ಇಲ್ಲದೆ ಪರದಾಡುತ್ತಿದ್ದ ಅಜ್ಜಿ ಮತ್ತು ಬುದ್ಧಿಮಾಂದ್ಯ ವಿಕಲಚೇತನ ಮಹಿಳೆಯರಿಗೆ ವಾತ್ಸಲ್ಯ ಯೋಜನೆಯಲ್ಲಿ ಮನೆಯನ್ನು ನಿರ್ಮಾಣ ಮಾಡಿಕೊಂಡು ಹಸ್ತಾಂತರ ಮಾಡಲಾಗಿದೆ. ಸುಮಾರು 1.50 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತವಾದ ಮನೆಯನ್ನು ನಿರ್ಮಾಣ ಮಾಡಲಾಗಿದ್ದು, ಅಡುಗೆ ಮನೆ, ಶೌಚಾಲಯ, ಕಲ್ಲಿನ ಮಂಚ ಸೇರಿದಂತೆ ವಿದ್ಯುತ್ ಸಂಪರ್ಕವನ್ನು ಮನೆಗೆ ಕಲ್ಪಿಸಿ ಕೊಡಲಾಗಿದೆ. ಹೊಸ ಮನೆಗೆ, ಹಾಲುಕ್ಕಿಸಿ ಗೃಹಪ್ರವೇಶವನ್ನು ಸಹ ಮಾಡಲಾಗಿದೆ.
ನಂಜನಗೂಡಿನ ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಸಿಬ್ಬಂದಿಗಳಿಗೆ ಗ್ರಾಮಸ್ಥರಿಂದ ಅಭಿನಂದನೆಯ ಮಹಾಪೂರವೇ ಹರಿದು ಬಂದಿದೆ. ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಮೈಸೂರು ಪ್ರಾದೇಶಿಕ ನಿರ್ದೇಶಕರಾದ ಜಯರಾಮ್ ನೆಲ್ಲಿತಾಯ ಅವರು ಮನೆಯನ್ನು ಹಸ್ತಾಂತರ ಮಾಡಿದ್ದಾರೆ. ಅಲ್ಲದೆ ವೃದ್ಧೆ ಗೌರಮ್ಮ ಕುಟುಂಬಕ್ಕೆ ಪ್ರತಿ ತಿಂಗಳು ಒಂದು ಸಾವಿರ ರೂ.ಗಳನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಮಾಸಾಸನವನ್ನು ನೀಡುತ್ತಿದ್ದಾರೆ.
ಮೈಸೂರು ಜಿಲ್ಲೆಯ ನಿರ್ದೇಶಕ ವಿಜಯಕುಮಾರ್ ನಾಗನಾಳ, ನಂಜನಗೂಡು ತಾಲ್ಲೂಕು ಕ್ಷೇತ್ರ ಯೋಜನಾಧಿಕಾರಿ ಕೆ.ಧರ್ಮರಾಜ್, ಗ್ರಾಮ ಪಂಚಾಯಿತಿಯ ಸದಸ್ಯ ಮುದ್ದುಮಾದಶೆಟ್ಟಿ, ಮೇಲ್ವಿಚಾರಕ ಉದಯ್, ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಶಮ, ಒಕ್ಕೂಟದ ಅಧ್ಯಕ್ಷ ಸುಮಾ, ಸುಬ್ಬಮ್ಮ, ಸೇವಾ ಪ್ರತಿನಿಧಿ ರತ್ನಮ್ಮ ಸೇರಿದಂತೆ ಶ್ರೀ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆಯ ಅಧಿಕಾರಿಗಳ ಪರಿಶ್ರಮದಿಂದ ಇಂದು ಶ್ರೀ ಧರ್ಮಸ್ಥಳ ಸಂಸ್ಥೆ ಕುಟುಂಬಕ್ಕೆ ಆಸರೆಯಾಗಿ ನಿಂತು ಬೆಳಕಾಗಿದ್ದಾರೆ.
ಸಿಎಂ ಸುಗಂಧರಾಜು ಪಬ್ಲಿಕ್ ನೆಕ್ಸ್ಟ್ ನಂಜನಗೂಡು.
PublicNext
24/11/2024 05:27 pm