ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಂಜನಗೂಡು: ಹರಕು ಬಟ್ಟೆ.. ಮುರುಕು ರೊಟ್ಟಿ..! ಶತಮಾನ ಕಳೆದರೂ ಬದಲಾಗದ ನಿರ್ಗತಿಕರ ಬದುಕು..!

ನಂಜನಗೂಡು: ದಕ್ಷಿಣ ಕಾಶಿ ನಂಜನಗೂಡು ಶ್ರೀ ನಂಜುಂಡೇಶ್ವರನಿಗೆ ದಿನ ಬೆಳಗಾದರೆ ತುಳಸಿ ಹಾರ ನೀಡುವವರ ಬದುಕು ಮೂರಾಬಟ್ಟೆಯಾಗಿದೆ. ನಂಜನಗೂಡು ನಗರಸಭಾ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ವಂಚಿತರಾಗಿದ್ದಾರೆ.

ಧಾರ್ಮಿಕ ಪುಣ್ಯಕ್ಷೇತ್ರ ನಂಜುಂಡೇಶ್ವರನ ಸನಿಹದಲ್ಲಿಯೇ ಇರುವ ಹಳ್ಳದಕೇರಿ ಬಡಾವಣೆಯಲ್ಲಿ ತಲೆಮಾರುಗಳಿಂದ 10ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿವೆ. ಪೂರ್ವಜರ ಕಾಲದಿಂದಲೂ ನಂಜುಂಡೇಶ್ವರನಿಗೆ ಪ್ರಿಯವಾದ ತುಳಸಿಹಾರ ತಯಾರಿಕೆಯೇ ಇವರ ಕಾಯಕವಾಗಿದೆ. ಸ್ವಂತ ಸೂರಿಲ್ಲ ದಾಖಲಾತಿ ಇದ್ದರೂ ಸರ್ಕಾರದ ಗ್ಯಾರಂಟಿ ಯೋಜನೆ ದೊರೆಯುತ್ತಿಲ್ಲ. ನಾಗರೀಕ ಸಮಾಜ ತಲೆ ತಗ್ಗಿಸುವಂತಹ ಹೀನಾಯ ಪರಿಸ್ಥಿತಿಯಲ್ಲಿ ಜೀವನ ದೂಡುತ್ತಿರುವ ನಿವಾಸಿಗಳು ಕೊಚ್ಚೆ ಕೊಳಚೆ ನೀರು ಹರಿಯುವ ಪ್ರದೇಶದಲ್ಲೇ ಬದುಕು ಸಾಗಿಸುತ್ತಿದ್ದಾರೆ. ಸ್ವಂತ ಸೂರಿಲ್ಲದೇ ಪರದಾಡುವಂತಾಗಿದೆ.

ಇದುವರೆಗೂ ನಮಗೆ ಕನಿಷ್ಟ ಮೂಲಭೂತ ಸೌಲಭ್ಯಗಳು ದೊರೆತಿಲ್ಲ. ನಮಗೂ ಕೇಳಿ ಕೇಳಿ ಸಾಕಾಗಿದೆ. ಯಾರೊಬ್ಬರೂ ನಮಗೆ ಸಹಾಯ ಮಾಡಿಲ್ಲ ಅಂತ ನೊಂದ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು. ಇನ್ನಾದರೂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಇವರ ಸಮಸ್ಯೆಗೆ ಸ್ಪಂದಿಸುವರೇ ಕಾದು ನೋಡಬೇಕಿದೆ.

ಸಿಎಂ ಸುಗಂಧರಾಜು, ಪಬ್ಲಿಕ್ ನೆಕ್ಸ್ಟ್, ನಂಜನಗೂಡು

Edited By : Suman K
PublicNext

PublicNext

04/12/2024 05:22 pm

Cinque Terre

8.05 K

Cinque Terre

0

ಸಂಬಂಧಿತ ಸುದ್ದಿ