ಮೈಸೂರು: ಪತ್ನಿಯನ್ನು ಕೊಲೆ ಮಾಡಿದ ಪಾಪಿ ಗಂಡ ಪೊಲೀಸರಿಗೆ ಶರಣಾಗಿದ್ದಾನೆ. ಮೈಸೂರಿನ ಹೆಬ್ಬಾಳದ ಲಕ್ಷ್ಮಿಕಾಂತ ನಗರದಲ್ಲಿ ಘಟನೆ ನಡೆದಿದೆ.
ಪತ್ನಿಯ ಕತ್ತು ಕುಯ್ದ ಪತಿ ಅರುಣ್ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. 4 ವರ್ಷದ ಹಿಂದೆ ಇವರು ಪ್ರೀತಿಸಿ ಅಂತರ್ಜಾತಿ ಮದುವೆ ಆಗಿದ್ದರು. ನಂತರದ ದಿನಗಳಲ್ಲಿ ಜಾತಿ ವಿಚಾರಕ್ಕೆ ದಂಪತಿ ನಡುವೆ ಜಗಳ ಆರಂಭವಾಗಿದೆ. ಜಗಳ ತಾರಕಕ್ಕೇರಿ ಪತಿ ಅರುಣ್ ಪತ್ನಿ ಶೃತಿಯನ್ನು ಕೊಲೆ ಮಾಡಿದ್ದಾನೆ. ಸ್ಥಳಕ್ಕೆ ಹೆಬ್ಬಾಳ ಪೊಲೀಸರು ಆಗಮಿಸಿ ತನಿಖೆ ಕೈಗೊಂಡಿದ್ದಾರೆ.
PublicNext
04/12/2024 07:14 pm