ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರು: ಮಹಿಳೆಯರ ನಡುವೆ ಗಲಾಟೆ, ಜಗಳ ಬಿಡಿಸಲು ಹೋದ ವ್ಯಕ್ತಿಯೇ ಸಾವು…!

ಮೈಸೂರು: ಮಹಿಳೆಯರ ನಡುವೆ ಜಗಳ ಬಿಡಿಸಲು ಹೋದ ವ್ಯಕ್ತಿಯೇ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆ ತಿ. ನರಸೀಪುರ ತಾಲ್ಲೂಕಿನ ದೊಡ್ಡೇಬಾಗಿಲು ಗ್ರಾಮದಲ್ಲಿ ನಡೆದಿದೆ. ಮಹದೇವಸ್ವಾಮಿ (45 ವರ್ಷ) ಮೃತ ದುರ್ದೈವಿ.

ರಾಜಮ್ಮ ಹಾಗೂ ನಂಜಮ್ಮ ಎಂಬುವರ ನಡುವೆ ಗಲಾಟೆ ನಡೆಯುತ್ತಿತ್ತು. ಗಲಾಟೆ ಬಿಡಿಸಲು ತೆರಳಿದ್ದ ಮಹದೇವಸ್ವಾಮಿ ಪತ್ನಿ ಶಶಿಕಲಾ ಮೇಲೆ ರಾಜಮ್ಮ ಹಲ್ಲೆ ಮಾಡಿದ್ದಾರೆ ಆಗ ಪತ್ನಿ ಶಶಿಕಲಾ ರಕ್ಷಣೆಗೆ ಮುಂದಾದ ಪತಿ ಮಹದೇವಸ್ವಾಮಿ ಮೇಲೆಯೂ ರಾಜಮ್ಮ ಹಲ್ಲೆ ಮಾಡಿದ್ದಾರೆ. ಈ ವೇಳೆ ಮಹದೇವಸ್ವಾಮಿ ಮರ್ಮಾಂಗಕ್ಕೆ ಪೆಟ್ಟು ಬಿದ್ದ ಹಿನ್ನೆಲೆ ಮಹದೇವಸ್ವಾಮಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಸ್ಥಳಕ್ಕೆ ಟಿ ನರಸೀಪುರ ಠಾಣೆ ಪೋಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಟಿ ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Manjunath H D
PublicNext

PublicNext

27/11/2024 05:40 pm

Cinque Terre

18.06 K

Cinque Terre

0