ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರು: ವಿದ್ಯಾರ್ಥಿಗಳನ್ನು ಠಾಣೆಗೆ ಕರೆ ತಂದ ಶಿಕ್ಷಕಿ…!

ಮೈಸೂರು : ಪೊಲೀಸರೆಂದರೆ ಮಾರು ದೂರ ಓಡುವ ಮಕ್ಕಳ ನಡುವೆ, ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಶಿಕ್ಷಕಿಯೊಬ್ಬರು ತನ್ನ ತಂದೆಯವರು 45 ವರ್ಷದ ಹಿಂದೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸಿದ ಪಿರಿಯಾಪಟ್ಟಣ ತಾಲೂಕಿನ ಬೈಲಕುಪ್ಪೆ ಪೊಲೀಸ್ ಠಾಣೆಗೆ ಸುಮಾರು 86 ವಿದ್ಯಾರ್ಥಿಗಳನ್ನು ಪ್ರವಾಸಕ್ಕೆ ಕರೆತಂದರು.

ಇಲ್ಲಿನ ಆರಕ್ಷಕ ಠಾಣೆಗೆ ಸೋಮವಾರ ಸಂಜೆ ವೇಳೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಭೇಟಿ ನೀಡಿ, ಅಂದಿನ ದಿನದಲ್ಲಿ ತನ್ನ ತಂದೆಯವರಾದ ಶ್ರೀನಿವಾಸ್ ಮೂರ್ತಿ ರವರ ಸೇವೆಯನ್ನು ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿ, ಠಾಣೆಯಲ್ಲಿ ಸೇವೆ ಸಲ್ಲಿಸಿದಂತಹ ಅಧಿಕಾರಿಗಳ ನಾಮಫಲಕ ಪಟ್ಟಿಯಲ್ಲಿ ತಮ್ಮ ತಂದೆಯವರ ಹೆಸರನ್ನು ವಿದ್ಯಾರ್ಥಿಗಳಿಗೆ ತೋರಿಸಿದ್ರು. ಈ ಮುಖಾಂತರ ತಂದೆಯವರು ಅಂದಿನ ದಿನದಲ್ಲಿ ನಿರ್ವಹಿಸಿದ್ದ ಕೆಲಸದ ವಿಶ್ವಾಸದ ಬಗ್ಗೆ, ಕರೆ ತಂದಿದ್ದ ವಿದ್ಯಾರ್ಥಿ ಸಮೂಹದೊಂದಿಗೆ ಕೆಲ ಸಮಯ ಸಂತಸ ಹಂಚಿಕೊಂಡರು.

ಠಾಣೆಯ ಸಿಬ್ಬಂದಿಗಳಾದ ಮಂಜು ಒಡೆನೂರ್, ಮಹೇಶ್, ಮಹಿಳಾ ಸಿಬ್ಬಂದಿ ಅಶ್ವಿತಾರವರು ಪೊಲೀಸ್ ಠಾಣೆಗೆ ಭೇಟಿ ನೀಡಿದ ವಿದ್ಯಾರ್ಥಿಗಳನ್ನು ಸ್ವಾಗತಿಸಿಕೊಂಡು, ಪೊಲೀಸ್‌ ಠಾಣೆಯ ದೈನಂದಿನ ಕರ್ತವ್ಯ, ಜನಸಾಮಾನ್ಯರ ಹಿತರಕ್ಷಣೆ, ಸಾರ್ವಜನಿಕರ ಆಸ್ತಿಪಾಸ್ತಿ ರಕ್ಷಣೆ, ಹಕ್ಕುಗಳ ರಕ್ಷಣೆ, ಮಕ್ಕಳ ಹಕ್ಕುಗಳ ಬಗ್ಗೆ ವಿವರಿಸಿದರು.

"ಪೊಲೀಸರೆಂದರೆ ಹೆದರುತ್ತಿದ್ದ ಮಕ್ಕಳು ಈಗ ಧೈರ್ಯವಾಗಿ ಮಾತನಾಡುತ್ತಿದ್ದಾರೆ. ತಮ್ಮಲ್ಲಿರುವ ಯಾವುದೇ ಗೊಂದಲವನ್ನು ಕೇಳದೇ ಹಿಂದಿರುಗುವ ಪ್ರಶ್ನೆ ಇಲ್ಲವೆಂಬ ಸನ್ನಿವೇಶ ಕಂಡುಬಂದಿತು. ಸರ್ ಇಸ್ಪೀಟ್ ಆಟವನ್ನು ಎಲ್ಲಾ ಕಡೆ ಆಡುತ್ತಾರಲ್ಲ ಅದನ್ನ ಆಡಲೇಬೇಕಾ? ಎಂದು ಒಬ್ಬ ವಿದ್ಯಾರ್ಥಿನಿ ಕೇಳಿದರೆ, ಮತ್ತೊಬ್ಬ ವಿದ್ಯಾರ್ಥಿನಿ ಆನ್ಲೈನ್ ಗೇಮ್ ಎಲ್ಲಾ ಕಡೆ ಬರುತ್ತದಲ್ಲ ಅದನ್ನ ಯಾರ್ ಸರ್ ಮಾಡೋದು ಅಂತ ಪೊಲೀಸರಿಗೆ ಪ್ರಶ್ನೆ ಹಾಕಿದರು.

Edited By : Suman K
Kshetra Samachara

Kshetra Samachara

03/12/2024 06:01 pm

Cinque Terre

1.4 K

Cinque Terre

0

ಸಂಬಂಧಿತ ಸುದ್ದಿ