ನಂಜನಗೂಡು: ಸರ್ಕಾರಿ ಶಾಲೆ ಅಂದ್ರೆ ಅಯ್ಯೋ ಅಂತ ಅಸಡ್ಡೆ ತೋರಿಸ್ತಾರೆ..ಯಾಕೆ ಗೊತ್ತಾ..? ಇಲ್ಲಿದೆ ನೋಡಿ ವಿಡಿಯೋ...ಸರ್ಕಾರಿ ಶಾಲೆ ಮಕ್ಕಳು ಕುಡಿಯುವ ನೀರಿಗಾಗಿ ಅನುಭವಿಸುತ್ತಿರುವ ಬವಣೆಯ ದೃಶ್ಯ... ಇದು ನಂಜನಗೂಡು ತಾಲೂಕಿನ ಹುಲ್ಲಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳ ದುಃಸ್ಥಿತಿ.
ಈ ಶಾಲೆಗೆ ಕುಡಿಯುವ ನೀರಿನ ಸೌಲಭ್ಯವಿಲ್ಲ, ಶಾಲೆಯಿಂದ ಒಂದು ಕಿಲೋ ಮೀಟರ್ ದೂರದಲ್ಲಿ ಕುಡಿಯುವ ನೀರಿನ 5 ರೂ ಕಾಯಿನ್ ಬೂತ್ ಇದೆ. ಪ್ರತಿದಿನ ಮೂರು ಮಕ್ಕಳು 20 ಲೀಟರ್ ಕ್ಯಾನ್ ಹಿಡಿದು ಹರಸಾಹಸ ಪಟ್ಟು ಹೊತ್ತು ತರುತ್ತಾರೆ. ಜನ ಪ್ರದೇಶದಲ್ಲಿ ಭಾರಿ ವಾಹನಗಳು ಓಡಾಡುವ ರಸ್ತೆಯಲ್ಲಿ ತಮ್ಮಲ್ಲಿರುವ ಶಕ್ತಿಯನ್ನೆಲ್ಲಾ ಬಳಸಿ ನೀರು ಹೊತ್ತು ತರುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯ ಒದಗಿಸಬೇಕಾದ್ದು ಶಿಕ್ಷಣ ಇಲಾಖೆ ಆದ್ಯ ಕರ್ತವ್ಯ. ಅದ್ರಲ್ಲೂ ಕುಡಿಯುವ ನೀರಿಗೆ ಪ್ರಥಮ ಆದ್ಯತೆ ಇರಬೇಕು. ಆದ್ರೆ ಈ ಶಾಲೆಯಲ್ಲಿ ಕುಡಿಯುವ ನೀರಿನ ಸೌಲಭ್ಯವಿಲ್ಲದೆ ಒಂದು ಕಿಲೋಮೀಟರ್ ದೂರದಿಂದ ತರಬೇಕಾದ ಅನಿವಾರ್ಯವಿದೆ.
ನೀರು ಹೊತ್ತು ತರುವ ವೇಳೆ ಯಾವುದಾದ್ರೂ ವಾಹನದಿಂದ ಮಕ್ಕಳಿಗೆ ಅಪಾಯವಾದ್ರೆ ಯಾರು ಹೊಣೆ...? ಶಿಕ್ಷಣ ಇಲಾಖೆ ಅಧಿಕಾರಿಗಳೇ.. ಜನಪ್ರತಿನಿಧಿಗಳೇ. ಅಪಾಯ ಸಂಭವಿಸುವ ಮುನ್ನ ಎಚ್ಚೆತ್ತುಕೊಳ್ಳಿ...!! ಜವಾಬ್ದಾರಿ ಮರೆತು ನಿರ್ಲಕ್ಷ್ಯದಿಂದ ಕಾರ್ಯನಿರ್ವಹಿಸಿರುವ ಶಿಕ್ಷಕರ ವಿರುದ್ಧ ಕ್ರಮಕ್ಕೆ ಮುಂದಾಗಬೇಕಿದೆ.
PublicNext
27/11/2024 07:01 pm