ನಂಜನಗೂಡು: ಯಾತ್ರಿ ನಿವಾಸ ಮತ್ತು ಅಡುಗೆ ಮನೆ ಮತ್ತು ಊಟದ ಕೊಠಡಿ ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿ ಉದ್ಘಾಟನಾ ಸಮಾರಂಭಕ್ಕೆ ಆಗಮಿಸದ ಜನಪ್ರತಿನಿಧಿಗಳು. ಇದರಿಂದಾಗಿ ಕಾದು ಕುಳಿತ ಗ್ರಾಮಸ್ಥರು, ಕಾರ್ಯಕರ್ತರು ಮತ್ತು ಸರ್ಕಾರಿ ಅಧಿಕಾರಿಗಳು ಹೈರಾಣಾಗಿರುವ ಘಟನೆ ನಂಜನಗೂಡು ತಾಲೂಕಿನ ದೇವನೂರು ಗ್ರಾಮದಲ್ಲಿ ನಡೆದಿದೆ.
ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಆಯೋಜನೆ ಮಾಡಲಾಗಿರುವ ಸರ್ಕಾರಿ ಕಾರ್ಯಕ್ರಮ ಇದಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್ .ಸಿ .ಮಹದೇವಪ್ಪ, ಸಂಸದ ಸುನೀಲ್ ಬೋಸ್, ಶಾಸಕ ದರ್ಶನ್ ಧ್ರುವ ನಾರಾಯಣ್ ಕಾರ್ಯಕ್ರಮಕ್ಕೆ ಆಗಮಿಸಬೇಕಿತ್ತು.
ಮಧ್ಯಾಹ್ನ 12 ಗಂಟೆಗೆ ಪ್ರಾರಂಭವಾಗಿ ಮುಕ್ತಾಯವಾಗಬೇಕಿದ್ದ ಸರ್ಕಾರಿ ಕಾರ್ಯಕ್ರಮ ಸಂಜೆ 4:00 ಆದರೂ ಕಾರ್ಯಕ್ರಮದಲ್ಲಿ ಭಾಗಿಯಾಗದ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಲು ಗ್ರಾಮಸ್ಥರು ಮತ್ತು ರಾಜಕೀಯ ಮುಖಂಡರು ಮುಂದಾದರು. ಸ್ವಪಕ್ಷೀಯ ಕಾರ್ಯಕರ್ತರೇ ಅಧಿಕಾರ ಬಂದ ಮೇಲೆ ಜೊತೆಯಲ್ಲಿದ್ದವರು ಮತ್ತು ಬೆಂಬಲಿಗರು ಕಾಣುವುದಿಲ್ಲ. ಅವರ ಸ್ವಪ್ರತಿಷ್ಠೆ ಗಳಿಗೆ ಮುಂಬರುವ ದಿನಗಳಲ್ಲಿ ತಕ್ಕ ಪಾಠ ಅನುಭವಿಸುತ್ತಾರೆ ಎಂದರು.
PublicNext
01/12/2024 06:45 pm