ಪಬ್ಲಿಕ್ ನೆಕ್ಸ್ಟ್ ಇಂಪ್ಯಾಕ್ಟ್ -
ಹುಬ್ಬಳ್ಳಿ: ಪಬ್ಲಿಕ್ ನೆಕ್ಸ್ಟ್ ಅಭಿಯಾನದಿಂದ ಸ್ವಚ್ಛಗೊಂಡ ವಾರ್ಡ್ ನಂಬರ್ 68ರ ಜೋಳದ ಓಣಿಯ ಸಮಸ್ಯೆ
ಹುಬ್ಬಳ್ಳಿ: ಇದು ಪಬ್ಲಿಕ್ ನೆಕ್ಸ್ಟ್ ಬಿಗ್ ಇಂಪ್ಯಾಕ್ಟ್... ನಮ್ಮ ಊರು, ನಮ್ಮ ಕೆರೆ, ನಮ್ಮ ವಾರ್ಡ್ ಅಭಿಯಾನವನ್ನು ಹಮ್ಮಿಕೊಂಡಿದ್ದು, ಹುಬ್ಬಳ್ಳಿಯ ವಾರ್ಡ್ ನಂಬರ್ 68ರ ಜೋಳದ ಓಣಿಯ ಸಮಸ್ಯೆಗಳ ಬಗ್ಗೆ ಸುದ್ದಿಯನ್ನು ಮಾಡಿದ್ದೇ ತಡ, ಕಾರ್ಪೊರೇಟರ್ ಆ ಸಮಸ್ಯೆಯನ್ನು ಬಗೆ ಹರಿಸಿದ್ದಾರೆ.
ನಿಮ್ಮ ಪಬ್ಲಿಕ್ ನೆಕ್ಸ್ಟ್ ನಮ್ಮ ಊರು ನಮ್ಮ ಕೆರೆ ನಮ್ಮ ವಾರ್ಡ್ ಎಂಬ ಅಭಿಯಾನದಲ್ಲಿ ಹುಬ್ಬಳ್ಳಿಯ ವಾರ್ಡ್ ನಂ.68ರ ಜನರ ಗೋಳು ಕೇಳುವರಾರು.? ಮೂಲಭೂತ ಸೌಕರ್ಯಗಳಿಂದ ವಂಚಿತರಾದ ಜನ ಎಂಬ ಶೀರ್ಷಿಕೆ ಅಡಿಯಲ್ಲಿ ಸುದ್ದಿಯನ್ನು ಬಿತ್ತರಿಸಿತ್ತು. ಸುದ್ದಿಯನ್ನು ನೋಡಿದ ಕಾರ್ಪೊರೇಟರ್ ನಿರಂಜನಯ್ಯ ಹಿರೇಮಠ ಅವರು ಸಮಸ್ಯೆಯನ್ನು ಬಗೆ ಹರಿಸಿದ್ದಾರೆ. ಈ ಜೋಳದ ಓಣಿಯಲ್ಲಿ ಜನರು ಸಾಕಷ್ಟು ಸಮಸ್ಯೆಗಳಿಂದ ತೊಂದರೆ ಅನುಭವಿಸುತ್ತಿದ್ದರು. ಇಲ್ಲಿ ಎಲ್ಲೆಂದರಲ್ಲಿ ಕಸ ಹಾಕುತ್ತಿದ್ದರು, ಕಸ ತೆರವು ಮಾಡಲು ಬರುತ್ತಿರಲಿಲ್ಲ. ಇದಷ್ಟೇ ಅಲ್ಲದೆ ಹಲವಾರು ಸಮಸ್ಯೆಗಳನ್ನು ಆಲಿಸಿ, ನಮ್ಮ ಪ್ರತಿನಿಧಿ ಈರಣ್ಣ ವಾಲಿಕಾರ ಪ್ರತ್ಯಕ್ಷ ವರದಿ ಮಾಡಿ, ಜನರ ಸಮಸ್ಯೆಗಳ ಬಗ್ಗೆ ಸುದ್ದಿ ಮಾಡಿದ್ದರು. ವರದಿಯನ್ನು ನೋಡಿದ ಕೂಡಲೆ ಈ ಭಾಗದ ಕಾರ್ಪೊರೇಟರ್ ನಿರಂಜನಯ್ಯ ಹಿರೇಮಠ ಅವರು ಕಸ ತೆರವು ಮಾಡಿಸಿದ್ದು ಅಷ್ಟೇ ಅಲ್ಲದೆ ಕೆಲವು ಸಮಸ್ಯೆಗಳನ್ನು ಬಗೆ ಹರಿಸಿದ್ದಾರೆ. ಈ ಕುರಿತು ಅಲ್ಲಿನ ನಿವಾಸಿಗಳು ಪಬ್ಲಿಕ್ ನೆಕ್ಸ್ಟ್ ಗೆ ಅಭಿನಂದನೆ ಸಲ್ಲಿಸಿದ್ದಾರೆ.
Kshetra Samachara
03/12/2024 05:54 pm