ಅಣ್ಣಿಗೇರಿ: ಅಧಿಕಾರ ಇಂದು ಇರುತ್ತದೆ ನಾಳೆ ಹೋಗುತ್ತದೆ. ಆದರೆ ನಾವು ಮಾಡಿದ ಸಾರ್ವಜನಿಕ ಕೆಲಸಗಳು ಶಾಶ್ವತವಾಗಿ ಉಳಿಯಬೇಕು. ಅಧಿಕಾರಕ್ಕಾಗಿ ನಾನು ಎಂದು ಅಂಟಿ ಕುಳಿತವನಲ್ಲ ಎಂದು ಶಾಸಕ ಕೋನರಡ್ಡಿ ಹೇಳಿದ್ದಾರೆ.
ಅಣ್ಣಿಗೇರಿ ಮಜ್ಜಿಗುಡ್ಡ ರಸ್ತೆ, ಮಜ್ಜಿಗುಡ್ಡ ಅಂತೂರು ಬೆಂತೂರು ರಸ್ತೆ, ಮಜ್ಜಿಗುಡ್ಡ ಕೋಳಿವಾಡ ರಸ್ತೆ, ಮಜ್ಜಿಗುಡ್ಡ ಮಲ್ಲಿಗೆವಾಡ ರಸ್ತೆ, ಮಜ್ಜಿಗುಡ್ಡ ಸ್ಮಶಾನ ರಸ್ತೆ ವೀಕ್ಷಣೆ ಮಾಡಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಕಳೆದ ಆರು ಏಳು ವರ್ಷಗಳಿಂದ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ಬಂದ್ ಆಗಿ ಸಾರ್ವಜನಿಕರು ಪರದಾಡುವಂತಹ ಪರಿಸ್ಥಿತಿ ಎದುರಾಗಿತ್ತು. ಸರಿ ಮಾಡಬೇಕು ಎನ್ನುವ ಸಮಯದಲ್ಲಿ ಮಳೆಗಾಲ ಪ್ರಾರಂಭವಾಗಿ ಕೆಲಸ ಪ್ರಾರಂಭಿಸಲು ಅನಾನುಕೂಲವಾಗಿತ್ತು. ಸದ್ಯ ಮಳೆಗಾಲ ಮುಗಿದ ಹಿನ್ನೆಲೆಯಲ್ಲಿ ಒಂದು ತಿಂಗಳಲ್ಲಿ ಎಲ್ಲ ರಸ್ತೆಗಳನ್ನು ಅಭಿವೃದ್ಧಿಪಡಿಸಿ ಸಂಚಾರಕ್ಕೆ ಮುಕ್ತಗೊಳಿಸಿದ್ದೇವೆ ಎಂದರು.
ಇನ್ನು ಈ ಗ್ರಾಮದಲ್ಲಿ ಮಳೆಗಾಲದಲ್ಲಿ ಸ್ಮಶಾನಕ್ಕೆ ಹೋಗುವ ರಸ್ತೆ ನೋಡು ತೀರದಂತಾಗಿತ್ತು. ಯಾರಾದರೂ ನಿಧನ ಹೊಂದಿದ್ದರೆ ಅಂತ್ಯಕ್ರಿಯೆ ಹೋಗಿ ಬರಲು ಸಮಸ್ಯೆಯಾಗಿತ್ತು. ಈಗ ಎಲ್ಲ ಸಮಸ್ಯೆಗಳು ಇಲ್ಲದಂತಾಗಿದೆ. ಅಲ್ಲದೆ ಗ್ರಾಮದ ಫ್ಲಾಟ್‌ಗಳಲ್ಲಿ ಮೊರಂ ಹಾಕಿ ಗಟ್ಟಿಗೊಳಿಸುವ ಕೆಲಸ ಆಗಿದೆ. ಅದೇ ರೀತಿ ಗ್ರಾಮಸ್ಥರಿಗೆ ಅನುಕೂಲವಾಗುವಂತೆ ಲಕ್ಷ್ಮೇಶ್ವರದಿಂದ ವಾಯಾ ಮಜ್ಜಿಗುಡ್ಡ ಅಣ್ಣಿಗೇರಿ ಬಸ್ ಬಂದಾಗಿತ್ತು. ಅದನ್ನು ಮತ್ತೆ ಪ್ರಾರಂಭಿಸಲು ಸಾರಿಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಸಾರ್ವಜನಿಕರಿಗಾಗಿ ಅನುಕೂಲಕ್ಕಾಗಿ ಅಭಿವೃದ್ಧಿ ಕೆಲಸಗಳನ್ನು ಮಾಡಲು ನಾನು ಸದಾ ಸಿದ್ಧ ಎಂದು ತಿಳಿಸಿದರು.
Kshetra Samachara
02/12/2024 08:55 pm