ಹುಬ್ಬಳ್ಳಿ: 2024 ನೇ ಸಾಲಿನ ನೈಋತ್ಯ ರೈಲ್ವೆ ಕಾರ್ಮಿಕ ಸಂಘದ ಯೂನಿಯನ್ ಚುನಾವಣೆ ಕಾವು ಜೋರಾಗಿದ್ದು, ಈ ಬಾರಿ ಚುನಾವಣೆಯಲ್ಲಿ ಸೀರಿಯಲ್ ನಂಬರ್ 02 ಟ್ರೀ ಗುರುತಿನ ಹುಟ್ಟು ಹೋರಾಟಗಾರ, ಯುವಕರ ಕಣ್ಮಣಿ, ರೈಲ್ವೆ ನೌಕರರ ಭವಿಷ್ಯದ ಭರವಸೆ ಪ್ರತೀಕ ಶ್ರೀ ಎಲ್ ಲಾಜರಸ್ ಅವರ ತಂಡ ಭರ್ಜರಿಯಾಗಿ ಚುನಾವಣೆ ಪ್ರಚಾರ ನಡೆಸುತ್ತಿದೆ.
ರೈಲ್ವೆ ಇಲಾಖೆ ಕೇಳ ಹಂತದ ನೌಕರರ ಗಟ್ಟಿ ಧ್ವನಿಯಾಗಿ, ನೆಮ್ಮದಿ ಬದುಕು ಕಟ್ಟಿಕೊಡುವ ಉದ್ದೇಶದಿಂದ, ನೈಋತ್ಯ ರೈಲ್ವೆ ಕಾರ್ಮಿಕ ಸಂಘದ ಯೂನಿಯನ್ ಅಧ್ಯಕ್ಷ ಸ್ಥಾನಕ್ಕೆ ಲಾಜರಸ್ ಅವರು ಸ್ಪರ್ಧೆ ಮಾಡಿದ್ದಾರೆ. ಇಷ್ಟು ದಿನ ರೈಲ್ವೆ ನೌಕರರ ಜೊತೆಗೆ ಮನೆ ಮಗನಂತೆ ಕಷ್ಟ ಸುಖಕ್ಕೆ ಭಾಗಿರುವ ಲಾಜರಸ್ ಅವರು ಈ ಬಾರಿ ಅಧಿಕಾರ ಗದ್ದುಗೆ ಏರುವ ಮೂಲಕ, ರೈಲ್ವೆ ನೌಕರರ ಬೆನ್ನೆಲುಬಾಗಿ ಬಾಳು ಬೆಳಗುವ ಉದ್ದೇಶದಿಂದ ಚುನಾವಣೆ ಕಣಕ್ಕೆ ಧುಮುಕುವ ಮೂಲಕ ಹೊಸ ಇತಿಹಾಸ ಬರೆಯುವ ಪ್ರಯತ್ನ ಮಾಡುತ್ತಿದ್ದಾರೆ.
ಈಗಾಗಲೇ ಗೋವಾ, ಬೆಂಗಳೂರು, ಮೈಸೂರು ಮತ್ತು ಹುಬ್ಬಳ್ಳಿ ವಲಯ ಸೇರಿದಂತೆ ಹುಬ್ಬಳ್ಳಿಯಲ್ಲಿ ಭರ್ಜರಿ ಚುನಾವಣೆ ಪ್ರಚಾರ ನಡೆಯುತ್ತಿದೆ.. ಈ ತಿಂಗಳ 4,5,6ರಂದು ನಡೆಯುವ ಮತದಾನದಲ್ಲಿ ರೈಲ್ವೆ ನೌಕರರು, ಲಾಜರಸ್ ಅವರ ಪರ ಮತ ಹಾಕುವ ಮೂಲಕ ನೂತನ ಇತಿಹಾಸ ಬರೆಯಲು ಸಜ್ಜಾಗಿದ್ದಾರೆ ಎನ್ನುವುದು ಅವರ ಮತ್ತು ಅವರ ಬೆಂಬಲಿಗರು ಭರವಸೆ ಮಾತು.
Kshetra Samachara
03/12/2024 08:20 pm