ಹುಬ್ಬಳ್ಳಿ: ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಸಭೆಯೊಂದರಲ್ಲಿ ವಿಶ್ವ ಗುರು ಬಸವೇಶ್ವರ ಅವರ ಹೆಸರನ್ನು ಪ್ರಸ್ತಾಪಿಸಿ ಅವಹೇಳನ ಹೇಳಿಕೆ ಖಂಡನೀಯ. ಕೂಡಲೇ ಬಹಿರಂಗವಾಗಿ ಕ್ಷಮೆ ಕೇಳಬೇಕು, ಎಂದು ಧಾರವಾಡ ಜಿಲ್ಲಾ ಘಟಕದ ಜಾಗತಿಕ ಲಿಂಗಾಯತ ಮಹಾಸಭಾದ ಅಧ್ಯಕ್ಷರಾದ ಎಮ್.ವ್ಹಿ. ಗೊಂಗಡ ಶೆಟ್ಟಿ ಹೇಳಿದರು.
ಬಸವಣ್ಣನವರ ವ್ಯಕ್ತಿತ್ವ ಘನತೆ ಅರಿಯದೆ ಯತ್ನಾಳ ಅವರು ಅವಹೇಳನಕಾರಿ ಮಾತನಾಡಿ, ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಭರದಲ್ಲಿ, ಗುರು ಬಸವಣ್ಣನವರಿಗೆ ಅವಮಾನ ಮಾಡಿದ್ದಾರೆ. ಕೂಡಲೇ ಯತ್ನಾಳ ಅವರು ಸಮಸ್ತ ಬಸವ ಭಕ್ತರ ಬಳಿ ಕ್ಷಮೆ ಕೇಳಿ ಹೇಳಿಕೆ ಹಿಂಪಡೆಯಬೇಕು. ಇಲ್ಲದಿದ್ದರೆ ಮಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
03/12/2024 02:02 pm