ಕುಂದಗೋಳ : ನವೆಂಬರ್ 29 ರಿಂದ ಡಿಸೆಂಬರ್ 6ರ ವರೆಗಿನ 7 ದಿನ ಗ್ರಾಮ ಪಂಚಾಯಿತಿ ಕರ ವಸೂಲಿ ಅಭಿಯಾನದಲ್ಲಿ ಕುಂದಗೋಳ ತಾಲೂಕು ಪಂಚಾಯಿತಿ 9 ಲಕ್ಷ 90 ಸಾವಿರ ಕರ ವಸೂಲಿ ಮಾಡಿ 24% ಸಾಧನೆ ಮಾಡಿದೆ.
ಜಿಲ್ಲಾ ಪಂಚಾಯತ್ ಸಿಇಒ ಸ್ವರೂಪ ಟಿಕೆಯವರ ಆದೇಶದಂತೆ ಈಗಾಗಲೇ ಜಿಲ್ಲಾದ್ಯಂತ ಕರ ವಸೂಲಿ ಅಭಿಯಾನ ನಡೆದಿದ್ದು, ಕುಂದಗೋಳ ತಾಲೂಕು 27 ಗ್ರಾಮ ಪಂಚಾಯಿತಿ ಸೇರಿ ಪ್ರಸ್ತುತ ವರ್ಷ 3 ಕೋಟಿ 23 ಲಕ್ಷ ಕರ ವಸೂಲಿ ಆಗಬೇಕಿದೆ.
ಒಟ್ಟು ಗತಿಸಿದ ವರ್ಷಗಳ ಪೈಕಿ ಕುಂದಗೋಳ ತಾಲೂಕು ಪಂಚಾಯಿತಿ 13 ಕೋಟಿ 80 ಲಕ್ಷ ಮನೆ, ನೀರಿನ ಕರ ವಸೂಲಿ ಬಾಕಿ ಉಳಿಸಿಕೊಂಡಿದೆ. ಸದ್ಯ ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿಗಳ ವಿವಿಧ ಅಧಿಕಾರಿ ವರ್ಗ ಸೇರಿ ಗ್ರಾಮ ಪಂಚಾಯಿತಿ ಮಟ್ಟದ ಸರ್ವ ಅಧಿಕಾರಿಗಳು ಕರ ವಸೂಲಿಗೆ ಕಾರ್ಯದಲ್ಲಿ ತೊಡಗಿದ್ದಾರೆ.
ಇನ್ನೂ ಮುಖ್ಯವಾಗಿ ಸ್ವತಃ ತಾಪಂ ಕಾರ್ಯ ನಿರ್ವಾಹಕ ಅಧಿಕಾರಿಗಳೇ ಸಾರ್ವಜನಿಕರಲ್ಲಿ ಮನವಿ ಮಾಡಿ ಗ್ರಾಮ ಪಂಚಾಯಿತಿ ಕರ ಭರಿಸಲು ಕೋರಿದ್ದಾರೆ.
ಒಟ್ಟಾರೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಮತ್ತು ಆರ್ಥಿಕವಾಗಿ ಸಬಲ ಮಾಡಿ ಅರ್ಹ ಸೌಲಭ್ಯಗಳನ್ನು ಪಡೆಯಲು ಹಳ್ಳಿಗರು ಮನೆ ಮತ್ತು ನೀರು ಸೇರಿದಂತೆ ಇತರ ಕರಗಳನ್ನು ಭರಿಸಿದರೇ ಒಳಿತು.
-ಶ್ರೀಧರ ಪೂಜಾರ, ಪಬ್ಲಿಕ್ ನೆಕ್ಸ್ಟ್
Kshetra Samachara
02/12/2024 06:26 pm