ಹುಬ್ಬಳ್ಳಿ: ಅಯ್ಯಪ್ಪ ಸ್ವಾಮಿಯ ಪರಮ ಭಕ್ತ, ಮಣಿಕಂಠನನ್ನೆ ಆರಾಧ್ಯ ದೈವ ಎಂದು ನಂಬಿದ, ಸ್ವರ್ಣ ಗ್ರೂಪ್ ಆಫ್ ಕಂಪನಿ ಮಾಲೀಕರಾದ ಡಾ. ಸಿ.ಎಚ್ ವಿಎಸ್‌ವಿ ಪ್ರಸಾದ್ ಅವರು ಸುಮಾರು ವರ್ಷಗಳಿಂದ ಅಯ್ಯಪ್ಪ ಮಾಲೆ ಧರಿಸುತ್ತ ಭಕ್ತಿ, ಶ್ರದ್ಧೆಯಿಂದ ನಡೆದುಕೊಳ್ಳುತ್ತ ಬಂದಿದ್ದಾರೆ.
ಇವರು 48 ಗಳ ಕಾಲ ವೃತ ಮಾಡಿ ಅಯ್ಯಪ್ಪನನ್ನು ಜ್ಞಾಪಿಸುತ್ತ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇಂದು ವಿಎಸ್‌ವಿ ಪ್ರಸಾದ್ ಅವರು ಇರುಮುಡಿ ಕಟ್ಟಿಕೊಂಡು 21 ನೇ ವರ್ಷದ ಶಬರಿಮಲೈ ಯಾತ್ರೆ ಬೆಳೆಸಿದ್ದಾರೆ.
ಎಸ್,,, ಆನಂದಗುರುಸ್ವಾಮಿ ಅವರ ನೇತೃತ್ವದಲ್ಲಿ, ಡಾ. ವಿಎಸ್‌ವಿ ಪ್ರಸಾದ್ ಅವರು ತಮ್ಮ ಸ್ವಗೃಹದಲ್ಲಿ ಅಯ್ಯಪ್ಪನಿಗೆ ವಿಶೇಷ ಪೂಜೆ ಮಾಡಿದರು. ಈ ಮಹಾ ಪೂಜೆಯಲ್ಲಿ ಚಿಗುರುಪಾಟಿ ವೆಂಕಟ ಸತ್ಯ ವರ ಪ್ರಸಾದ್ ಗುರುಸ್ವಾಮಿ ಭಕ್ತ ವೃಂದ ಭಾಗಿಯಾಗಿದ್ದರು.
ವಿ.ಆರ್.ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ವಿಜಯ ಸಂಕೇಶ್ವರ ಸೇರಿದಂತೆ ಹಲವಾರು ಗಣ್ಯರು ಸೇರಿ ಇಡಿ ನವೀನ ಪಾರ್ಕ್ ನಿವಾಸಿಗಳು ಪೂಜೆಯಲ್ಲಿ ಭಾಗವಹಿಸಿ ಆಶೀರ್ವಾದ ಪಡೆದರು. ಪೂಜ್ಯ ಆನಂದಗುರುಸ್ವಾಮಿ ಅವರು ಎಲ್ಲ ಅಯ್ಯಪ್ಪ ಮಾಲಾಧಾರಿ ಸ್ವಾಮಿಗಳಿಗೆ ಇರುಮುಡಿ ಕಟ್ಟಿ ಚಾಲನೆ ನೀಡಿದರು.
ಇನ್ನು ಅಯ್ಯಪ್ಪನ ಪರಮ ಭಕ್ತ ವಿಎಸ್‌ವಿ ಪ್ರಸಾದ್ ಅವರು 21 ನೇ ವರ್ಷದ ಶಬರಿಮಲೈ ಯಾತ್ರೆ ಬೆಳಸಿದ್ದಾರೆ. ಇವರ ಜೊತೆಗೆ ಸುಮಾರು 13 ಜನ ಅಯ್ಯಪ್ಪ ಮಾಲಾಧಾರಿ ಸ್ವಾಮಿಗಳನ್ನು ತಮ್ಮೊಂದಿಗೆ ಅಯ್ಯಪ್ಪನ ಸನ್ನಿಧಿಗೆ ಕರೆದುಕೊಂಡು ಇಂದು ಪ್ರಯಾಣ ಬೆಳೆಸಿದ್ದಾರೆ. ವಿಎಸ್‌ವಿ ಪ್ರಸಾದ್ ಸ್ವಾಮಿ ಅವರು ತಮ್ಮ ಸ್ವಗೃಹದಲ್ಲಿ ಇರುಮುಡಿಯ ಪೂಜೆ ಮಾಡಿಸಿದರು.
ಭಕ್ತವೃಂದದವರು ಬಂದು ಎಲ್ಲ ಅಯ್ಯಪ್ಪ ಮಾಲಾಧಾರಿಗಳಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು.
ಈ ಶಬರಿಮಲೈ ಯಾತ್ರೆ ಎಲ್ಲ ಜನರು ಸುಖ ಶಾಂತಿಯಿಂದ ಜೀವನ ಸಿಗಲೆಂದು ಅಯ್ಯಪ್ಪನಲ್ಲಿ ಬೇಡಿಕೊಳ್ಳವೆಂದು ವಿಎಸ್‌ವಿ ಪ್ರಸಾದ್ ಸ್ವಾಮಿ ಅವರು ಹೇಳುತ್ತಾರೆ.
ಇನ್ನು ಚಿಗುರುಪಾಟಿ ವೆಂಕಟ ಸತ್ಯ ವರ ಪ್ರಸಾದ್ ಗುರುಸ್ವಾಮಿ ಭಕ್ತ ವೃಂದ ಅಯ್ಯಪ್ಪ ಸನ್ನಿಧಿಯತ್ತ ಪ್ರಯಾಣ ಬೆಳಸಿದ್ದು, ಇವರ ಶಬರಿಮಲೈ ಯಾತ್ರೆ ಸುಖಕರವಾಗಲೇಂದು ಹುಬ್ಬಳ್ಳಿ ಜನರು ಆಶಿಸುತ್ತಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
03/12/2024 01:55 pm