ನವಲಗುಂದ: ಪಟ್ಟಣದ ಸಮಗಾರ ಶಿವಶರಣ ಹರಳಯ್ಯ ಸಮಾಜದ ಶ್ರೀಚಕ್ರ ಧಾರಣಿ ಬಳ್ಳಾರಿ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಡಿಸೆಂಬರ್ 1ರಂದು ಭಾನುವಾರ ಪ್ರತಿ ವರ್ಷದಂತೆ ಈ ವರ್ಷವು ಕೂಡಾ ಕಾರ್ತಿಕ ದೀಪೋತ್ಸವ ಕಾರ್ಯಕ್ರಮ ಜರುಗುವುದು.
ಪಟ್ಟಣದ ಶಾರದೇಶ್ವರ ಆಶ್ರಮ ಅನನ್ಯಮಯಿ ಮಾತಾಜಿ ದಿವ್ಯಸಾನಿಧ್ಯ ವಹಿಸುವರು ಗೌರವಾನ್ವಿತ ಅತಿಥಿಗಳಾಗಿ ಹಿರಿಯ ನ್ಯಾಯವಾದಿ ವಿದ್ಯಾಧರ ಪಾಟೀಲ ಭಾಗವಹಿಸುವರು.
ಬಿ ಎನ್ ಬಿಲಗುಂದಿ, ಡಾ. ಎಸ್ ಟಿ ಬಾಗಲಕೋಟಿ, ಗಂಗಾಧರಸ್ವಾಮಿ ಕೋ ಹಿರೇಮಠ ಅವರು ಭಕ್ತಿ ಸೇವೆ ಅರ್ಪಿಸುವರು. ಈ ಶುಭ ಕಾರ್ಯದಲ್ಲಿ ಸಕಲ ಭಕ್ತಾದಿಗಳು ಭಾಗವಹಿಸಿ ತಾಯಿಯ ಕೃಪಾಶೀರ್ವಾದಕ್ಕೆ ಪಾತ್ರರಾಗಬೇಕೆಂದು ಎಂದು ದೇವಸ್ಥಾನದ ಮಹಾಪೋಷಕರಾದ ಪ್ರೊ. ಪರಶುರಾಮ ಎಂ. ಹೊನಕೇರಿ ತಿಳಿಸಿದ್ದಾರೆ.
Kshetra Samachara
29/11/2024 01:02 pm