ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಪ್ರತಿಭಾವಂತರನ್ನು ಉತ್ತೇಜಿಸುವ ಕಾರ್ಯವಾಗಲಿ - ಬಸವಣ್ಣಜ್ಜ

ಕುಂದಗೋಳ : ವೀರಶೈವ ಸಮಾಜ ಸಂಘಟನೆಯ ಜೊತೆಗೆ ವಿವಿಧ ಕ್ಷೇತ್ರಗಳ ಸಾಧಕರನ್ನು ಉತ್ತೇಜಿಸುವ ಕೆಲಸ ನಿಮ್ಮಿಂದಾಗಲಿ ಎಂದು ಕಲ್ಯಾಣಪುರದ ಶ್ರೀ ಅಭಿನವ ಬಸವಣ್ಣಜ್ಜನವರು ಸಲಹೆ ನೀಡಿದರು.

ತಾಲೂಕ ಅಖಿಲ‌ ಭಾರತ ವೀರಶೈವ ಸಭಾದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.

ವೀರಶೈವ ಸಮಾಜದಲ್ಲಿ ಅನೇಕ ಪ್ರತಿಭಾವಂತರಿದ್ದಾರೆ.‌ ಅವರನ್ನೂ ಉತ್ತೇಜಿಸಬೇಕಾದ ಕಾರ್ಯವು ತಾಲೂಕ ಮಹಾಸಭಾದಿಂದ ಆಗಬೇಕಿದೆ.

ಹಾನಗಲ್ಲ ಗುರು ಕುಮಾರೇಶ್ವರ ಆಶೀರ್ವಾದದಿಂದ ಉದಯಿಸಿದ ಮಹಾಸಭಾವು 12 ನೇ ಶತಮಾನದಲ್ಲಿ ಸಮಾಜ ಸುಧಾರಣೆಗೆ ಅನೇಕ ಶರಣರ ವಚನಗಳು ಮಾದರಿಯಾಗಿವೆ. ಅವರ ಆದರ್ಶದ ಅನುಕರಣೆಗಳು ದಾರಿ ದೀಪವಾಗಬೇಕಿದೆ. ಪ್ರತಿ ತಿಂಗಳೂ ಒಬ್ಬೊಬ್ಬ ಮಹಾನ ಶರಣರ ಚಿಂತನೆಗಳು ಪ್ರಚುರಪಡಿಸಬೇಕಿದೆ. ಅನೇಕ ಒಳಪಂಗಡಗಳು ಇನ್ನೂ ಕೂಡ‌ ಮುಖ್ಯ ವಾಹಿನಿಗೆ ಬಂದಿಲ್ಲ. ಕೇವಲ ಅಧಿಕಾರ ಪದಗ್ರಹಣ ಇದಾಗಬಾರದು ಎಂದು ಕಿವಿ‌ಮಾತು ಹೇಳಿದರು.

ಇದೇ ವೇಳೆ ಸಹಕಾರಿ ರತ್ನ ಪುರಸ್ಕೃತ ಎ.ಬಿ.ಉಪ್ಪೀನ ಹಾಗೂ ನೂತನ ತಾಲೂಕ ಘಟಕದ ಅದ್ಯಕ್ಷರಾಗಿ ಆಯ್ಕೆಯಾದ ಉಮೇಶ ಹೆಬಸೂರ ಅವರನ್ನು ಸನ್ಮಾನಿಸಲಾಯಿತು.

ಇದಕ್ಕೂ‌ ಮುನ್ನ ಎರಡನೇ ಬಾರಿ ಮಹಾಸಭಾದ ತಾಲೂಕ ಘಟಕದ ಗೌರವಾದ್ಯಕ್ಷರಾಗಿ ನೇಮಕಗೊಂಡ. ಕಲ್ಯಾಣಪುರದ ಶ್ರೀ ಬಸವಣ್ಣಜ್ಜನವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಮಹಾಸಭಾದ ನೂತನ‌ ಅದ್ಯಕ್ಷರಾಗಿ ಉಮೇಶ್ ಹೆಬಸೂರ,ಉಪಾಧ್ಯಕ್ಷರಾಗಿ ಶಂಕರಗೌಡ ದೊಡಮನಿ, ಮಹಿಳಾ ಉಪಾಧ್ಯಕ್ಷರಾದ ಶ್ರೀಮತಿ ದೃತಿ ಸಾಲ್ಮನಿ, ಮತ್ತೋರ್ವ ಉಪಾಧ್ಯಕ್ಷ ಮಹಾರುದ್ರಪ್ಪ ಮೂಲಿಮನಿ, ಪ್ರಧಾನ ಕಾರ್ಯದರ್ಶಿಯಾಗಿ ಶಿವಾನಂದ ನವಲಗುಂದ, ಖಜಾಂಚಿಯಾಗಿ ಬಸವಲಿಂಗಪ್ಪ ಕೋರಿ,ಕಾರ್ಯದರ್ಶಿ ಗಳಾಗಿ ಡಿ.ಸಿ.ಹಿರೇಮಠ, ಶ್ರೀಮತಿ ಮಂಗಳಾ ರಾಯರ, ಶ್ರೀಮತಿ ರೇಣುಕಾ ಸವಣೂರ ಅವರ ಆಯ್ಕೆಯನ್ನು ಚುನಾವಣಾಧಿಕಾರಿ ವೀರೇಶ ಪ್ರಳಯಕಲ್ಮಠ ಘೋಷಿಸಿದರು.

Edited By : Nirmala Aralikatti
Kshetra Samachara

Kshetra Samachara

03/12/2024 11:42 am

Cinque Terre

45.74 K

Cinque Terre

0

ಸಂಬಂಧಿತ ಸುದ್ದಿ