ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಮೊಗ್ಗ: ಸಾಧನೆಗೆ ಶಾರ್ಟ್ ಕಟ್ ಇರುವುದಿಲ್ಲ - ವಿದೂಷಿ ಸುರೇಖಾ ಹೆಗಡೆ

ಶಿವಮೊಗ್ಗ : ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಲು ಶಾರ್ಟ್ ಕಟ್ ಇರುವುದಿಲ್ಲ. ಹೆಚ್ಚಿನ ಪರಿಣಿತಿ ಪಡೆಯಲು ಸಾಧಿಸಲು ನಿರಂತರ ಅಭ್ಯಾಸ ಅಗತ್ಯ ಎಂದು ಸ್ವರ ಸುಮನ ಬಿರುದಾಂಕಿತ ಖ್ಯಾತ ಗಾಯಕಿ ವಿದೂಷಿ ಸುರೇಖಾ ಹೆಗಡೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಭಾನುವಾರ ನಗರದ ತುಳಜಾ ಭವನ್‌ನಲ್ಲಿ, ಭಾವಸಾರ ಕ್ಷತ್ರಿಯ ಮಹಾಜನ ಸಮಾಜ ಹಾಗೂ ಭಾವಸಾರ ಕ್ಷತ್ರಿಯ ಯುವಕ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಸ್ವರ ಸುಮನ ಎಂಬ ಬಿರುದು ಗೌರವ ಸ್ವೀಕರಿಸಿ ಅವರು ಮಾತನಾಡಿದ್ದಾರೆ. ಸಾಧನೆಗೈಯಲು ನಿರಂತರವಾದ ಶ್ರದ್ಧೆ, ಏಕಾಗ್ರತೆ, ಅಚಲ ಮನಸ್ಸು ಇರಬೇಕು. ಆಗ ಮಾತ್ರ ಯಾವುದೇ ಕ್ಷೇತ್ರದಲ್ಲಿ ಸಾಧನೆ ತೋರಲು, ಯಶಸ್ಸು ಕಾಣಲು ಸಾಧ್ಯ ಎಂದು ಯುವ ಪೀಳಿಗೆಗೆ ಹಾಗೂ ಪೋಷಕರಿಗೆ ಕಿವಿ ಮಾತು ಹೇಳಿದರು.

ಅನೇಕ ಪೋಷಕರು ಇತ್ತೀಚಿನ ದಿನಗಳಲ್ಲಿ ತಮ್ಮ ಮಗಳಿಗೆ, ಮಗನಿಗೆ ಸಂಗೀತಾಭ್ಯಾಸ ಮಾಡಿಸಿ ಎಂದು ದುಂಬಾಲು ಬಿದ್ದು, ಒಂದೆರೆಡು ತಿಂಗಳಲ್ಲಿ ಯಾವುದಾದರೂ ರಿಯಾಲಿಟಿ ಶೋ ನಲ್ಲಿ ಹಾಡಬಹುದಾ ಎಂದು ಕೇಳುತ್ತಾರೆ. ಇದು ಶೋಚನೀಯ ಸ್ಥಿತಿಯಾಗಿದ್ದು, ಇಂದಿನ ಪೀಳಿಗೆಯಲ್ಲಿ ಹಲವಾರು ಜನರು ಸಾಧಿಸಲು ತಯಾರಿಲ್ಲ. ಬಂದ ತಕ್ಷಣ ಹರಿಬಿರಿಯಲ್ಲಿ ಕಲಿಯಲು ಹಾತೊರೆಯುತ್ತಾರೆ. ತಕ್ಷಣ ಯಶಸ್ಸು ಸಿಗಬೇಕೆಂದು ಬಯಸುತ್ತಾರೆ. ಇದು ತಪ್ಪು ನಿರ್ಧಾರವಾಗಿದ್ದು, ತಾಳ್ಮೆಯಿಂದ ಸಾಧಿಸಿದರೆ, ಪ್ರಶಸ್ತಿ, ಬಿರುದು, ಸನ್ಮಾನಗಳು ತಾನಾಗಿಯೇ ಹುಡುಕಿಕೊಂಡು ಬರುತ್ತದೆ. ನಿರಂತರ ಸಾಧನೆಯೇ, ಉತ್ತುಂಗಕ್ಕೆ ಏರಲು ಸಾಧ್ಯ ಎಂದರು. ಇನ್ನು ಇದೇ ವೇಳೆ, ತಮಗೆ ಸ್ವರ ಸುಮನ ಎಂಬ ಬಿರುದು ನೀಡಿದ್ದಕ್ಕೆ ಧನ್ಯವಾದ ತಿಳಿಸಿದ ಅವರು, ಈ ಪುರಸ್ಕಾರದ ಮೂಲಕ ತಮಗೆ ಹೊಸ ಹುಮ್ಮಸ್ಸು, ಇಂಬು ಸಿಕ್ಕಂತಾಗಿದೆ ಎಂದು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ಇನ್ನು ಕಾರ್ಯಕ್ರಮದಲ್ಲಿ, 2023-24 ನೇ ಸಾಲಿನಲ್ಲಿ, ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿಯುಸಿಯಲ್ಲಿ ಕನ್ನಡ ವಿಷಯದಲ್ಲಿ ಶೇ. 85ಕ್ಕಿಂತಲೂ ಹೆಚ್ಚಿನ ಅಂಕ ಪಡೆದ ಭಾವಸಾರ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು.

ಕಾರ್ಯಕ್ರಮದ ವೇದಿಕೆಯಲ್ಲಿ ಭಾವಸಾರ ಕ್ಷತ್ರಿಯ ಮಹಾಜನ ಸಮಾಜದ ಅಧ್ಯಕ್ಷ ಟಿ.ವಿ. ಗಜೇಂದ್ರನಾಥ್ ಮಾಳೋದೆ, ಶ್ರೀ ರಾಮಸೇವಾ ಭಾವಸಾರ ಕ್ಷತ್ರಿಯ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿ ಅಧ್ಯಕ್ಷ ಸಂತೋಷ್ ಸಾಕ್ರೆ, ಯುವ ಮುಖಂಡ ವಿನಯ್ ತಾಂದ್ಲೆ, ಕಾರ್ಯದರ್ಶಿ ಕಿರಣ್ ಬಾಂಬೋರೆ, ಉಪಾಧ್ಯಕ್ಷರಾದ ಮಂಜುನಾಥ್ ಬೇದ್ರೆ, ಸುಬ್ಬರಾವ್ ಗುಜ್ಜರ್ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾವಸಾರ ಕ್ಷತ್ರಿಯ ಯುವಕ ಸಂಘದ ಅಧ್ಯಕ್ಷ ಸಚಿನ್ ಬೇದ್ರೆ ವಹಿಸಿದ್ದರು.

Edited By : Vijay Kumar
PublicNext

PublicNext

02/12/2024 03:11 pm

Cinque Terre

11.68 K

Cinque Terre

0

ಸಂಬಂಧಿತ ಸುದ್ದಿ