ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಾಗರ: ಸಾಹಿತಿ ನಾ.ಡಿಸೋಜ ರವರ ಬದುಕು ಮತ್ತು ಬರಹ ಯುವಜನರಿಗೆ ಅನುಕರಣೀಯವಾದದ್ದು : ಶಾಸಕ ಗೋಪಾಲಕೃಷ್ಣ ಬೇಳೂರು

ಸಾಗರ : ಸಾಹಿತಿ ನಾ.ಡಿಸೋಜ ನಮ್ಮೂರಿನ ಹೆಮ್ಮೆಯ ಸಾಹಿತಿ. ಅವರ ಬದುಕು ಮತ್ತು ಬರಹ ಯುವಜನರಿಗೆ ಅನುಕರಣೀಯವಾದದ್ದು ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ತಿಳಿಸಿದರು.

ಇಲ್ಲಿನ ಕಾಗೋಡು ತಿಮ್ಮಪ್ಪ ರಂಗಮಂದಿರದಲ್ಲಿ ಅನಿಮಿಷ ತಂಡದ ವತಿಯಿಂದ ಏಸುಪ್ರಕಾಶ್ ಮತ್ತು ವಿಲಿಯಂ ಅವರ ನೆನಪಿನಲ್ಲಿ ಸಾಹಿತಿ ಡಾ. ನಾ.ಡಿಸೋಜ ಕುರಿತ ನಾಡಿ ಬದುಕು ಬರಹ ಸಾಕ್ಷಾö್ಯಚಿತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.

ಕನ್ನಡ ಸಾಹಿತ್ಯಕ್ಕೆ ನಾ.ಡಿಸೋಜ ನೀಡಿರುವ ಕೊಡುಗೆ ಅಪಾರವಾಗಿದೆ. ಸಾಹಿತ್ಯದ ಬೇರೆಬೇರೆ ಪ್ರಾಕಾರಗಳಲ್ಲಿ ಕೆಲಸ ಮಾಡಿರುವ ನಾ.ಡಿಸೋಜ ಅವರ ಕೃತಿಗಳು ಚಲನಚಿತ್ರವಾಗಿ ನಿರ್ಮಾಣಗೊಂಡು ರಾಷ್ಟçಪ್ರಶಸ್ತಿಯನ್ನು ಪಡೆದಿರುವುದು ಹೆಮ್ಮೆಯ ಸಂಗತಿ. ಅವರ ಬದುಕು ಮತ್ತು ಬರಹ ಕುರಿತು ಮುಂದಿನ ಪೀಳಿಗೆಗೆ ತಿಳಿಸುವ ಉದ್ದೇಶದಿಂದ ತೆಗೆದಿರುವ ಸಾಕ್ಷಾö್ಯಚಿತ್ರ ಎಲ್ಲರೂ ವೀಕ್ಷಣೆ ಮಾಡಬೇಕು ಎಂದರು.

ಸಾಹಿತಿ ವಿಲಿಯಂ ಸಾಹಿತ್ಯ ಕ್ಷೇತ್ರಕ್ಕೆ ಮತ್ತು ಚಿತ್ರನಟ ಯೇಸು ಪ್ರಕಾಶ್ ಸಿನಿಮಾ ಮತ್ತು ಪರಿಸರ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಗಮನಾರ್ಹವಾದದ್ದು. ಅವರ ನೆನಪಿನಲ್ಲಿ ಈ ಕಾರ್ಯಕ್ರಮವನ್ನು ಅಭಿಮಾನಿಗಳು ಮಾಡುವ ಮೂಲಕ ಅವರ ಸಾಧನೆ ಸ್ಮರಿಸಿಕೊಳ್ಳುತ್ತಿರುವುದು ಅನುಕರಣೀಯ ಎಂದರು.

ನಾ.ಡಿಸೋಜ ಅವರ ಒಡನಾಡಿಗಳಾದ ವೈ.ಎ.ದಂತಿ, ವಿಜಯವಾಮನ್, ಹಿರಿಯ ಸಾಹಿತಿ ಡಾ. ಜಿ.ಎಸ್.ಭಟ್, ಕಲಾವಿದ ಅರುಣಕುಮಾರ್, ರಂಗಕರ್ಮಿ ಪುರುಷೋತ್ತಮ ತಲವಾಟ ಇನ್ನಿತರರು ಮಾತನಾಡಿದರು. ನವೀನ್ ಡಿಸೋಜ, ಸಂತೋಷ್ ವಸಿಷ್ಟ, ಪ್ರದೀಪ್, ನಾಗರಾಜ್, ನಿರಂಜನ್, ಪದ್ಮಶ್ರೀ, ಶೈಲಜಾ, ಧನುಷ್ ಕುಮಾರ್ ಇನ್ನಿತರರು ಹಾಜರಿದ್ದರು.

Edited By : PublicNext Desk
Kshetra Samachara

Kshetra Samachara

01/12/2024 04:10 pm

Cinque Terre

2.28 K

Cinque Terre

0

ಸಂಬಂಧಿತ ಸುದ್ದಿ