ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಾಗರ: ನಾನು ಮನುಷ್ಯ ಧರ್ಮದ ಪ್ರತಿಪಾದಕ ,ಸರ್ವ ಜನಾಂಗಗಳು ಅಭಿವೃದ್ದಿ ಹೊಂದಬೇಕು : ಶಾಸಕ ಗೋಪಾಲಕೃಷ್ಣ ಬೇಳೂರು

ಸಾಗರ : ನಾನು ಮನುಷ್ಯ ಧರ್ಮದ ಪ್ರತಿಪಾದಕ. ಜಾತಿಮತ ಪಂಥವನ್ನು ಬಿಟ್ಟು ಸರ್ವ ಜನಾಂಗಗಳು ಅಭಿವೃದ್ದಿ ಹೊಂದಬೇಕು ಎನ್ನುವುದು ನನ್ನ ಪ್ರಮುಖ ಗುರಿಯಾಗಿದೆ ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ತಿಳಿಸಿದರು.

ಇಲ್ಲಿನ ಸಂತ ಜೋಸೆಫರ ಚರ್ಚ್ ಆವರಣದಲ್ಲಿ ಮಂಗಳವಾರ ನಗರಸಭೆ ವತಿಯಿಂದ ಅಳವಡಿಸುತ್ತಿರುವ ಹೈಮಾಸ್ಕ್ ವಿದ್ಯುತ್ ದೀಪಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.

ಸುಸ್ಥಿರ ಸಮಾಜ ನಿರ್ಮಾಣಕ್ಕೆ ಎಲ್ಲ ಜಾತಿಧರ್ಮಗಳ ಪಾತ್ರವೂ ಅವಶ್ಯವಾಗಿರುತ್ತದೆ. ಸಾಮರಸ್ಯ ಸಮಾಜವಿದ್ದಾಗ ಮಾತ್ರ ಆರೋಗ್ಯಪೂರ್ಣ ವಾತಾವರಣ ನಿರ್ಮಾಣವಾಗುತ್ತದೆ. ಈ ಹಿನ್ನೆಲೆಯಲ್ಲಿ ಎಲ್ಲ ಸಮುದಾಯದ ಏಳಿಗೆಗಾಗಿ ಅಗತ್ಯ ಇರುವ ಯೋಜನೆ ರೂಪಿಸಲಾಗುತ್ತದೆ. ಕ್ರಿಶ್ಚಿಯನ್ ಸಮುದಾಯದ ಪ್ರಮುಖರು ಮತ್ತು ಧರ್ಮಗುರುಗಳು ಚುನಾವಣೆಗೂ ಮುನ್ನ ಕೆಲವು ಬೇಡಿಕೆಗಳನ್ನು ಇರಿಸಿದ್ದರು. ಅದಕ್ಕೆ ಪೂರಕವಾಗಿ ಕಾಂಪೋAಡ್ ನಿರ್ಮಾಣ ಮಾಡಲಾಗಿದ್ದು, ಹೈಮಾಸ್ಕ್ ದೀಪದ ಬೇಡಿಕೆ ಈಡೇರಿಸಲಾಗಿದೆ. ಮುಂದಿನ ದಿನಗಳಲ್ಲಿ ಸಮುದಾಯದ ಬೇಡಿಕೆಯನ್ನು ಹಂತಹಂತವಾಗಿ ಈಡೇರಿಸುವ ಭರವಸೆ ನೀಡಿದರು.

ಸಂತ ಜೊಸೇಫರ ಚರ್ಚ್ ಧರ್ಮಗುರು ಫೆಲಿಕ್ಸ್ ನರೋನಾ ಮಾತನಾಡಿ, ಶಾಸಕರು ನಮ್ಮ ಬೇಡಿಕೆಯನ್ನು ಶಾಂತರೀತಿಯಿಂದ ಕೇಳಿ ಅದನ್ನು ಈಡೇರಿಸುವ ನಿಟ್ಟಿನಲ್ಲಿ ವಿಶೇಷ ಪ್ರಯತ್ನ ನಡೆಸಿರುವುದು ಸಂತೋಷದ ಸಂಗತಿ. ಶಾಸಕರ ಅಭಿವೃದ್ದಿ ಕೆಲಸ ಹೀಗೆಯೆ ಮುಂದುವರೆಯಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಗಣಪತಿ ಮಂಡಗಳಲೆ, ಉಮೇಶ್, ರವಿ ಲಿಂಗನಮಕ್ಕಿ, ಪ್ರಮುಖರಾದ ಸುರೇಶಬಾಬು, ತಾರಾಮೂರ್ತಿ, ಅನ್ವರ್ ಭಾಷಾ, ಕೆ.ಸಿದ್ದಪ್ಪ, ಚಂದ್ರಪ್ಪ, ಉಷಾ ಎನ್., ಮರಿಯಾ ಲೀಮಾ, ಮೈಕೆಲ್ ಡಿಸೋಜ, ವಿಲ್ಸನ್ ಗೋನ್ಸಾಲ್ವಿಸ್, ಅರ್ಥರ್ ಗೋಮ್ಸ್ ಇನ್ನಿತರರು ಹಾಜರಿದ್ದರು

Edited By : PublicNext Desk
Kshetra Samachara

Kshetra Samachara

03/12/2024 03:32 pm

Cinque Terre

600

Cinque Terre

0

ಸಂಬಂಧಿತ ಸುದ್ದಿ