ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಮೊಗ್ಗದ ಬಸವ ಕೇಂದ್ರದ ಬಸವ ಮರುಳಸಿದ್ದ ಸ್ವಾಮಿಗಳಿಗೆ ಚಿನ್ಮಯಾನುಗ್ರಹ ದೀಕ್ಷೆ - ಮಾಜಿ ಎಂ.ಎಲ್.ಸಿ. ರುದ್ರೆಗೌಡ

ಶಿವಮೊಗ್ಗ: ಬಸವ ಕೇಂದ್ರದ ಡಾ. ಶ್ರೀ ಬಸವ ಮರುಳಸಿದ್ದ ಸ್ವಾಮಿಗಳವರ ಚಿನ್ಮಯಾನುಗ್ರಹ ದೀಕ್ಷಾ ಸಮಾರಂಭವು ಡಿಸೆಂಬರ್‌ 5ರಂದು ನಡೆಯಲಿದೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡ್ರು ತಿಳಿಸಿದ್ದಾರೆ.

ಶಿವಮೊಗ್ಗದ ವೆಂಕಟೇಶ ನಗರದಲ್ಲಿರುವ ಬಸವ ಕೇಂದ್ರದಲ್ಲಿ ಡಿಸೆಂಬರ್‌ 5ರಂದು ಬೆಳಿಗ್ಗೆ 5 ಗಂಟೆಗೆ ಬೆಕ್ಕಿನ ಕಲ್ಮಠದ ಜಗದ್ಗುರು ಡಾ. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ತಮ್ಮ ಲಿಂಗ ಹಸ್ತದಿಂದ ಡಾ. ಶ್ರೀ ಬಸವ ಮರುಳಸಿದ್ದ ಸ್ವಾಮಿಗಳವರಿಗೆ ಅನುಗ್ರಹಿಸಲಿದ್ದಾರೆ. ಈ ದೀಕ್ಷಾ ವಿಧಿ ವಿಧಾನದ ಸಂದರ್ಭದಲ್ಲಿ, ಈರ್ವರು ಶ್ರೀಗಳ ಜೊತೆಯಲ್ಲಿ 6 ಷಡುಸ್ಥಲ ಮೂರ್ತಿಗಳು, ಒಬ್ಬರು ವಚನಮೂರ್ತಿಗಳು ಹಾಗೂ ನಾಡಿನ ಹಲವು ಸ್ವಾಮೀಜಿಗಳು ಉಪಸ್ಥಿತರಿದ್ದು ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಿಕೊಡಲಿದ್ದಾರೆ ಎಂದಿದ್ದಾರೆ.

11 ಗಂಟೆಯಿಂದ ಮಾಚೇನಹಳ್ಳಿ ಡೈರಿ ಪಕ್ಕದಲ್ಲಿರುವ ಬಸವನೆಲೆಗೆ ನೀಡಿರುವ ಜಾಗದಲ್ಲಿ ನಡೆಯುವ ಬಹಿರಂಗ ಸಮಾವೇಶನದಲ್ಲಿ ಈರ್ವರು ಶ್ರೀಗಳ ಜೊತೆಯಲ್ಲಿ ನಿಟ್ಟೂರಿನ ಶ್ರೀ ಬ್ರಹ್ಮಶ್ರೀ ನಾರಾಯಣಗುರು ಸಂಸ್ಥಾನದ ಜಗದ್ಗುರು ಶ್ರೀ ರೇಣುಕಾನಂದ ಮಹಾಸ್ವಾಮೀಜಿ, ಹಾಗೂ ಕಡೂರಿನ ಯಳನಾಡು ಸಂಸ್ಥಾನ ಮಠದ ಜಗದ್ಗುರು ಶ್ರೀ ಜ್ಞಾನಪ್ರಭು ಸಿದ್ದರಾಮ ದೇಶಿಕೇಂದ್ರ ಮಹಾಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ನಾಡಿನ ಹಲವು ಸ್ವಾಮೀಜಿಗಳ ಸಮ್ಮುಖದಲ್ಲಿ ಜರುಗುವ ಈ ಅಧಿವೇಶನವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉದ್ಘಾಟಿಸಲಿದ್ದು, ಸಂಸದ ಬಿ.ವೈ.ರಾಘವೇಂದ್ರ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್ ಮಧು ಬಂಗಾರಪ್ಪ ಉಪಸ್ಥಿತರಿರಲಿದ್ದು, ಚಿನ್ಮಯನುಗ್ರಹ ದೀಕ್ಷೆಯ ಕುರಿತಾಗಿ ನಾಡಿನ ಹಿರಿಯ ಸಂಶೋಧಕ ಡಾ. ವೀರಣ್ಣ ರಾಜೂರ ಅವರು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಈ ಸಮಾವೇಶನದಲ್ಲಿ 2 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದರು.

Edited By : Suman K
Kshetra Samachara

Kshetra Samachara

02/12/2024 05:49 pm

Cinque Terre

13.94 K

Cinque Terre

0

ಸಂಬಂಧಿತ ಸುದ್ದಿ