ಶಿವಮೊಗ್ಗ: ಸಚಿವ ಸಂಪುಟದ ಬಗ್ಗೆ ಒಂದು ಭಾರಿ ಚರ್ಚೆ ನಡೆದಿದೆ. ಈಗ ಈ ವಿಷಯ ತಣ್ಣಗಾಗಿದೆ ಎಂದು ಶಿವಮೊಗ್ಗದಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಬೇಳೂರು ಗೋಪಾಲಕೃಷ್ಣ ಅವರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ನಮ್ಮ ಮುಖಂಡರ ಜೊತೆ ಚರ್ಚೆ ಮಾಡಿದ್ದಾರೆ. ಮಾರ್ಚ್ ವರೆಗೆ ಸಚಿವ ಸಂಪುಟದ ಬಗ್ಗೆ ಪ್ರಸ್ತಾಪ ಮಾಡಬಾರದು ಎಂದು ಹೇಳಿದ್ದಾರೆ. ಹಾಗಾಗಿ ಸದ್ಯಕ್ಕೆ ಸಚಿವ ಸಂಪುಟ ಪುನಾರಚನೆ ವಿಚಾರ ಅದು ನೆನೆಗುದ್ದಿಗೆ ಬಿದ್ದಿದೆ. ಸಚಿವ ಸಂಪುಟ ಪುನರಚನೆ ಬಗ್ಗೆ ಚರ್ಚೆ ಮಾಡುವ ಅವಶ್ಯಕತೆ ಇಲ್ಲ ಎಂದರು.
ನಾನೇನು ಸನ್ಯಾಸಿ ಅಲ್ಲ. ನಾನು ಮೂರು ಬಾರಿ ಶಾಸಕನಾಗಿದ್ದೇನೆ. ನಾನು ಆಕಾಂಕ್ಷಿಯಾಗಿಯೇ ಇರುತ್ತೇನೆ. ಅವಕಾಶ ಕೊಟ್ಟರೆ ಕೆಲಸ ಮಾಡ್ತೇನೆ. ಆದರೆ ಅದಕ್ಕಾಗಿ ಹೈಕಮಾಂಡ್ ಮೇಲೆ ಪ್ರಭಾವ ಬೀರುವುದಿಲ್ಲ ಎಂದರು.
ಬಿಜೆಪಿ ಗಲಾಟೆ ನಮಗ್ಯಾಕೆ ಬೇಕು? ಮೂರಕ್ಕೆ ಮೂರು ಗೆಲ್ಲುತ್ತೇವೆ ಅಂತ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳುತ್ತಿದ್ದರು. ಈಗ ವಿಜಯೇಂದ್ರ ನಾಯಕತ್ವದಲ್ಲಿ ಮೂರಕ್ಕೆ ಮೂರು ಸೋತಿದ್ದಾರೆ. ನೈತಿಕ ಹೊಣೆ ಹೊತ್ತು ವಿಜಯೇಂದ್ರ ರಾಜೀನಾಮೆ ಕೊಡಬೇಕು ಎಂದರು.
ಬಿಜೆಪಿಯವರೇ ರಾಜೀನಾಮೆ ಕೇಳುತ್ತಿದ್ದಾರೆ ನಾವೇನು ಕೇಳಬೇಕಾದ ಅವಶ್ಯಕತೆ ಇಲ್ಲ. ಬಿಜೆಪಿಯಲ್ಲೇ ಬೆಂಕಿ ಬಿದ್ದಿದೆ, ನಮ್ಮ ಪಕ್ಷದಲಲ್ಲ, ಸರ್ಕಾರ ಗಟ್ಟಿ ಇದೆ. ಉಪ ಚುನಾವಣೆಯಿಂದ ಸಿಎಂ ಹುಮ್ಮಸ್ಸಿನಲ್ಲಿದ್ದಾರೆ. ಗೊಂದಲ ಸೃಷ್ಟಿ ಮಾಡಿದ ಪಕ್ಷದಲ್ಲೇ ಈಗ ಬೆಂಕಿ ಬಿದ್ದಿದೆ ಎಂದು ವ್ಯಂಗ್ಯವಾಡಿದರು.
ರಾಜ್ಯ ಸರ್ಕಾರ ಸರ್ಕಾರ ಒಳ್ಳೆ ರೀತಿಯಲ್ಲಿ ನಡೆದುಕೊಂಡು ಹೋಗುತ್ತಿದೆ. ಮುಡಾ, ವಕ್ಫ್ ತಂದು ವಿರೋಧ ಪಕ್ಷದವರು ಗೊಂದಲ ಸೃಷ್ಟಿ ಮಾಡಿದ್ದರು. ಉಪ ಚುನಾವಣೆ ನಂತರ ಬಿಜೆಪಿ ಅಸ್ತಿತ್ವ ಇಲ್ಲದೆ ಆ ಪಕ್ಷದ ನಾಯಕರು ಕುಸಿದು ಹೋಗಿದ್ದಾರೆ. ಪ್ರತಿನಿತ್ಯ ಯತ್ನಾಳ್ ಹಾಗೂ ವಿಜಯೇಂದ್ರ ಬಣದಲ್ಲಿ ಬೀದಿ ಜಗಳ ನಡೆಯುತ್ತಿದೆ ಎಂದರು.
ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆ ಮಾಡಲು ತಯಾರಿದ್ದೇವೆ. ಕಾಂಗ್ರೆಸ್ ಮೇಲೆ ಜನತೆ ವಿಶ್ವಾಸ ಇಟ್ಟಿದ್ದಾರೆ. ಮುಂದಿನ ಎಲ್ಲಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
PublicNext
03/12/2024 07:06 pm