ಶಿವಮೊಗ್ಗ : ಸಾಧು ಸಂತರು ಧರ್ಮವನ್ನು ಉಳಿಸಲು, ಆಕ್ರೋಶದಲ್ಲಿ ಕೆಲವು ಮಾತುಗಳನ್ನು ಹೇಳಿದ್ರೆ, ಕಾಂಗ್ರೆಸ್ ಸರ್ಕಾರ ಇಂತಹವರ ವಿರುದ್ಧ ಕೇಸ್ ದಾಖಲಿಸಿಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ ಎಂದು ಕೆ.ಎಸ್.ಈಶ್ವರಪ್ಪ ಪ್ರಶ್ನೆ ಮಾಡಿದ್ದಾರೆ. ಚಂದ್ರಶೇಖರ ಸ್ವಾಮೀಜಿಯವರು ಆಕ್ರೋಶದಲ್ಲಿ ಮುಸ್ಲಿಂರಿಗೆ ಮತದಾನ ಹಕ್ಕನ್ನು ನೀಡಬಾರದು ಎಂದು ಹೇಳಿದ್ದನ್ನೇ ಇಟ್ಟುಕೊಂಡು ಅವರ ವಿರುದ್ಧ ಕೇಸ್ ದಾಖಲಿಸಿಕೊಂಡಿರುವುದು ಸರಿಯಲ್ಲ ಎಂದಿದ್ದಾರೆ.
ಅಲ್ಲದೇ, ಈಗಾಗಲೇ ಅವರು ಕ್ಷಮೆಯನ್ನು ಕೂಡ ಕೇಳಿದ್ದಾರೆ. ಸಾಧು ಸಂತರು ಕೆಲವೊಮ್ಮೆ ಧರ್ಮಕ್ಕಾಗಿ ಈ ರೀತಿ ಮಾತನಾಡುತ್ತಿರುವುದು ಸಹಜವಾಗಿದೆ ಎಂದು ಈಶ್ವರಪ್ಪ ಆಕ್ರೋಶ ಹೊರ ಹಾಕಿದ್ದಾರೆ. ನನ್ನ ಮೇಲೆ ಕೇಸ್ ದಾಖಲಿಸಿಕೊಂಡಿರುವ ಕಾಂಗ್ರೆಸ್ ಸರ್ಕಾರ, ಮಲ್ಲಿಕಾರ್ಜುನ ಖರ್ಗೆಯವರ ಮೇಲೂ ಕೂಡ ದಾಖಲಿಸಬೇಕಿತ್ತು. ಇದೇ ಮಾತು ಸ್ವಾಮೀಜಿಯವರ ಮೇಲೂ ಕೇಸ್ ಹಾಕಿದ್ದಕ್ಕೂ ಅನ್ವಯವಾಗುತ್ತದೆ ಎಂದು ಈಶ್ವರಪ್ಪ ಪ್ರತಿಕ್ರಿಯಿಸಿದ್ದಾರೆ.
PublicNext
30/11/2024 04:44 pm