ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಮೊಗ್ಗ: ಸೂಕ್ತ ದಾಖಲೆ ಹೊಂದಿದ ಚಾಲಕರಿಗೆ ಚಾಲಕರ ಲೇಬರ್ ಕಾರ್ಡ್ ವಿತರಣೆ

ಶಿವಮೊಗ್ಗ : ಕರ್ನಾಟಕ ಕಟ್ಟಡ ಕಾರ್ಮಿಕರ ಮತ್ತು ಅಸಂಘಟಿತ ಕಾರ್ಮಿಕರ ಹಿತರಕ್ಷಣಾ ವೇದಿಕೆಯ ಜಿಲ್ಲಾ ಚಾಲಕರ ಕಾರ್ಮಿಕರ ಘಟಕದ ವತಿಯಿಂದ ಡಿ. 5 ಮತ್ತು ಡಿ. 6ರಂದು ಬೆಳಿಗ್ಗೆ 10.30ರಿಂದ ಸಂಜೆ 6ರವರೆಗೆ ದುರ್ಗಿಗುಡಿ 2ನೇ ತಿರುವಿನಲ್ಲಿರುವ ಕಚೇರಿಯಲ್ಲಿ ಶಿವಮೊಗ್ಗ ಜಿಲ್ಲಾ ಚಾಲಕರಿಗೆ ಉಚಿತವಾಗಿ " ಚಾಲಕರ ಲೇಬರ್ ಕಾರ್ಡ್"ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆಯ ಸಂಸ್ಥಾಪಕ ಹಾಗೂ ರಾಜ್ಯಾಧ್ಯಕ್ಷ ಸತೀಶ್ ತಿಳಿಸಿದ್ದಾರೆ. ಚಾಲಕರಿಗೆ ಲೇಬರ್ ಕಾರ್ಡ್ ಬಗ್ಗೆ ಸರಿಯಾದ ಮಾಹಿತಿ ಇರಲಿಲ್ಲ. ಇತ್ತೀಚೆಗೆ ಚಾಲಕರು ಒಟ್ಟುಗೂಡಿ ಚಾಲಕ ಕಾರ್ಮಿಕರ ಘಟಕವನ್ನು ಸ್ಥಾಪನೆ ಮಾಡಿದ್ದಾರೆ.

ಉಚಿತ ಚಾಲಕರ ಲೇಬರ್ ಕಾರ್ಡ್ ಗಾಗಿ ಚಾಲಕರು ಆಧಾರ್ ಕಾರ್ಡ್, ರೇಷನ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ, ಪಾಸ್‌ಪೋರ್ಟ್ ಸೈಜಿನ ಫೋಟೋಗಳನ್ನು ತರಬೇಕಾಗಿದ್ದು, ಚಾಲಕರು, ನಿರ್ವಾಹಕ, ಕ್ಲೀನರ್, ನಿಲ್ದಾಣ ಸಿಬ್ಬಂದಿ, ಬುಕ್ಕಿಂಗ್ ಗುಮಾಸ್ತ, ಡಿಪೋ ಗುಮಾಸ್ತ, ಮೋಟಾರ್ ಗ್ಯಾರೇಜ್ ಸಿಬ್ಬಂದಿ, ನಿಲ್ದಾಣ ಲೋಡಿಂಗ್/ಅನ್ ಲೋಡಿಂಗ್ ಸಿಬ್ಬಂದಿ, ಟೈರ್ ಜೋಡಿಸುವ ಅಥವಾ ಬೇರ್ಪಡಿಸುವ ಸಿಬ್ಬಂದಿ ಸೇರಿದಂತೆ ಇನ್ನಿತರರು ಈ ಕಾರ್ಡ್ನ ಸೌಲಭ್ಯ ಪಡೆಯಬಹುದಾಗಿದೆ ಎಂದರು.

ಅರ್ಹರಿಗೆ ಮಾತ್ರ ಕಾರ್ಡ್ ನ್ನು ವಿತರಿಸಲಾಗುತ್ತಿದ್ದು, ಎಲ್ಲಾ ದಾಖಲೆಗಳು ಇದ್ದರೆ ಮಾತ್ರ ಇದರ ಪ್ರಯೋಜನ ಪಡೆಯಬಹುದು ಎಂದು ತಿಳಿಸಿದ್ದಾರೆ.

Edited By : Suman K
Kshetra Samachara

Kshetra Samachara

04/12/2024 06:11 pm

Cinque Terre

920

Cinque Terre

0

ಸಂಬಂಧಿತ ಸುದ್ದಿ