ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಾಗರ: ಸಂಕ್ರಾಂತಿ ನಂತರ ಕಾಂಗ್ರೆಸ್ ಪಕ್ಷದಲ್ಲಿ ಬೆಂಕಿ ಬೀಳುತ್ತೆ - ಹರತಾಳು ಹಾಲಪ್ಪ

ಸಾಗರ: ಬೆಂಕಿ ಬಿಜೆಪಿ ಪಕ್ಷದಲ್ಲಿ ಬಿದ್ದಿರುವುದು ಅಲ್ಲ ಸಂಕ್ರಾಂತಿ ನಂತರ ಕಾಂಗ್ರೆಸ್ ಪಕ್ಷದಲ್ಲಿ ಬೆಂಕಿ ಯಾವ ರೀತಿ ಬೀಳುತ್ತೆ ಕಾದು ನೋಡಿ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ ಸಾಗರದಲ್ಲಿ ಹೇಳಿಕೆ ನೀಡಿದ್ದಾರೆ.

ಬುಧವಾರ ಪಬ್ಲಿಕ್ ನೆಕ್ಸ್ಟ್ ನೊಂದಿಗೆ ಮಾತನಾಡಿ, ಭಾರತೀಯ ಜನತಾ ಪಾರ್ಟಿಯ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ಹರತಾಳು ಹಾಲಪ್ಪ, ದಾವಣಗೆರೆಯಲ್ಲಿ ಯಾವುದೇ ಸಮಾವೇಶ ನಡೆಯೋದಿಲ್ಲ ನಿಷ್ಠರಿಂದ ನಡೆಯಲ್ಲ ವಿರೋಧಿಗಳಿಂದಲೂ ನಡೆಯಲ್ಲ ಆದರೆ ಬಿಜೆಪಿ ಸಮಾವೇಶ ನಡೆಯಬಹುದು.

ಎಲ್ಲರೂ ಒಟ್ಟಾಗಿ ಒಂದಾಗಿ ಹೋಗುತ್ತೇವೆ ಮುಂದೆ ಒಳ್ಳೆಯದಾಗುತ್ತೆ ನಮ್ಮ ಹೈಕಮಾಂಡ್ ಗಟ್ಟಿಯಾಗಿದೆ ಕೆಲವರು ಮುಂದೆ ಹೋಗಿ ಮಾತನಾಡಿದ್ದಾರೆ ತಪ್ಪಾಗಿದೆ ಇದು ಎಲ್ಲವನ್ನು ಸರಿಪಡಿಸುತ್ತಾರೆ ನಮ್ಮ ಹೈಕಮಾಂಡ್. ಕಾರ್ಯಕರ್ತರು ಆ ಕ್ಷಣದಲ್ಲಿ ಹೇಳಿದ್ದಾರೆ ಆ ಸಂದರ್ಭದಲ್ಲಿ ಸಿಟ್ಟು ಬರುತ್ತೆ ಆಕ್ರೋಶ ಬರುತ್ತೆ ಎಲ್ಲವನ್ನು ತೆಗೆದುಕೊಂಡು ಹೋಗಲು ಆಗಲ್ಲ, ಬಿಜೆಪಿ ಪಕ್ಷದಲ್ಲಿ ಬೆಂಕಿ ಬಿದ್ದಿರುವುದು ಅಲ್ಲ ಕಾಂಗ್ರೆಸ್ ಪಕ್ಷದಲ್ಲಿ ಸಂಕ್ರಾಂತಿಯ ನಂತರ ಯಾವ ರೀತಿ ಬೆಂಕಿ ಬೀಳುತ್ತೆ ಕಾದು ನೋಡಿ ರಾಜ್ಯದಲ್ಲೇ ನಾನೇ ಮೊದಲು ಹೇಳುತ್ತಿರುವುದು ಮೂರು ತಿಂಗಳ ನಂತರ ರಾಜ್ಯ ರಾಜಕೀಯದಲ್ಲಿ ಏನಾಗುತ್ತೆ ಎಂದು ನೋಡೋಣ ಎಂದು ಹೇಳಿಕೆ ನೀಡಿದ್ದಾರೆ.

ವರದಿ: ಜಮೀಲ್ ಸಾಗರ್ (ಪಬ್ಲಿಕ್ ನೆಕ್ಸ್ಟ್ ಸಾಗರ)

Edited By : PublicNext Desk
PublicNext

PublicNext

04/12/2024 05:04 pm

Cinque Terre

10.41 K

Cinque Terre

1

ಸಂಬಂಧಿತ ಸುದ್ದಿ