ಬೆಳಗಾವಿ: ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ದಂಪತಿ ಮೇಲೆ ಎರಡು ಕರಡಿ ದಾಳಿ ಮಾಡಿದ್ದು, ರೈತನ ಕಾಲು ತುಂಡು ತುಂಡಾಗಿದೆ. ಈ ಘಟನೆಯು ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಮಾನ ಗ್ರಾಮದಲ್ಲಿ ನಡೆದಿದೆ
ಎರಡು ಕರಡಿಗಳು ಏಕಾಏಕಿ ದಾಳಿಗೆ ಮಾಡಿದಾಗ ಮರವೇರಿ ಮಹಿಳೆ ಪ್ರಾಣ ಉಳಿಸಿಕೊಂಡಿದ್ದಾಳೆ. ಕರಡಿ ದಾಳಿಗೆ ಸಿಲುಕದ ಮಹಿಳೆಯ ಪತಿಯ ಸ್ಥಿತಿ ಚಿಂತಾಜನಕವಾಗಿದೆ. ಮಾನ ಗ್ರಾಮದ ಸಕುರಾಮ ಮಹಾದೇವ ಗಾಂವಕರ್(63) ಎಂಬುವರ ಸ್ಥಿತಿ ಚಿಂತಾ ಜನಕವಾಗಿದೆ. ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಎರಡು ಕರಡಿಗಳಿಂದ ಏಕಾಏಕಿ ದಾಳಿ ಮಾಡಿವೆ. ಗಂಭೀರ ಗಾಯಗೊಂಡ ಸಕುರಾಮ ಅವರನ್ನು ಬೆಳಗಾವಿ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ನೀಡಲಾಗುತ್ತಿದೆ.
PublicNext
02/12/2024 01:51 pm