ಬೈಲಹೊಂಗಲ: ತಾಲೂಕಿನ ಉಡಿಕೇರಿ ಗ್ರಾಮದ ಬಸ್ ನಿಲ್ದಾಣದ ಬಳಿ ಇರುವ ಹೊಲದಲ್ಲಿ ಮುಗಿಲೆತ್ತರಕ್ಕೆ ಬೆಳೆದು ನಿಂತಿದ್ದ ಕಬ್ಬನ ಬೆಳೆಗೆ ಶುಕ್ರವಾರ ಬೆಂಕಿ ತಗುಲಿ 18 ಎಕರೆಯಲ್ಲಿ ಬೆಳೆದು ನಿಂತಿದ್ದ ಕಬ್ಬು ಸಂಪೂರ್ಣ ಸುಟ್ಟು ಭಸ್ಮವಾಗಿದೆ.
ಉಡಿಕೇರಿ ಗ್ರಾಮದ ಪ್ರಗತಿಪರ ರೈತರಾದ ಮಹಾಂತೇಶ ಪರಮೇಶ್ವರ ಗೂಳಪ್ಪನವರರವರಿಗೆ ಸೇರಿದ ಹೊಲದಲ್ಲಿ ಬೆಳೆದ ಕಬ್ಬು ಎನ್ನಲಾಗಿದ್ದು ಅವಘಡದಿಂದ ಸುಮಾರು 45 ಲಕ್ಷ ರೂ ಮೌಲ್ಯದ ಕಬ್ಬು ಬೆಂಕಿಗಾಹುತಿಯಾಗಿದೆ.
ಪೆಟ್ರೋಲ್ ಬಂಕ್ ಬಳಿಯೆ ಕಬ್ಬಿನ ಹೊಲವಿದ್ದು ಗ್ರಾಮಸ್ಥರ ಒಗ್ಗಟ್ಟಿನ ಹೋರಾಟದಿಂದ ಭಾರಿ ಅನಾಹುತ ತಪ್ಪಿದೆ ಅಗ್ನಿಶಾಮಕ ದಳದ ವಾಹನ ಬರುವವರಗೆ ಇಡೀ ಗ್ರಾಮದ ಜನ ತಮ್ಮ ಮನೆಗಳಲ್ಲಿನ ಕೊಡ, ಬಿಂದಿಗೆ ಬಕೆಟ್‌ಗಳಲ್ಲಿ ನೀರು ತುಂಬಿಕೊಂಡು ಬಂದು ನೂರಾರು ರೈತರ ನೆರವಿನಿಂದ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ.
ಸವದತ್ತಿ, ಬೈಲಹೊಂಗಲ ಕಿತ್ತೂರು ಅಗ್ನಿಶಾಮಕ ವಾಹನಗಳು ಬಂದು ಸ್ಥಳೀಯರ ನೆರವಿನಿಂದ ಬೆಂಕಿ ನಂದಿಸಿದ್ದಾರೆ.
ಹೊಲದ ಮೇಲೆ ಹಾದು ಹೊಗಿದ್ದ ಹೆಸ್ಕಾಂ ಹೈ ಟೆನ್ಶನ್ ವಿದ್ಯುತ್ ತಂತಿಗಳು ಒಂದಕ್ಕೊಂದು ತಾಗಿ ಉಂಟಾದ ವಿದ್ಯುತ್ ಶಾರ್ಟ ಸರ್ಕಿಟನಿಂದ ಬೆಂಕಿ ಹೊತ್ತಿಕೊಂಡು ಇಡೀ ಹೊಲದ ಕಬ್ಬಿಗೆಲ್ಲ ವ್ಯಾಪಿಸಿ ಕಬ್ಬು ಸಂಪೂರ್ಣ ಸುಟ್ಟು ಹೋಗಿದೆ.
ಬೈಲಹೊಂಗಲ ಹೆಸ್ಕಾಂ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ವರದಿ ಮಾಡಿಕೊಂಡಿದ್ದಾರೆ.
ದೊಡವಾಡ ಠಾಣೆ ಪೋಲೀಸರು ಸ್ಥಳಕ್ಕೆ ಭೇಟಿ ಕೊಟ್ಟು ಪ್ರಕರಣ ದಾಖಲಿಸಿಕೊಂಡಿದ್ದಾರೆ.
PublicNext
29/11/2024 10:16 pm