ಚಿಕ್ಕೋಡಿ: ಟಿಪ್ಪರ್‌ಗೆ ವಿದ್ಯುತ್ ತಂತಿ ತಗುಲಿ ಚಾಲಕ ಸಾವನ್ನಪ್ಪಿರುವ ಘಟನೆ ಚಿಕ್ಕೋಡಿ ನಗರದ ಹಿರೇಕೂಡಿ ರಸ್ತೆಯಲ್ಲಿ ನಡೆದಿದೆ.
ಆನಂದ್ ಈಶ್ವರ ಕೆಸ್ತಿ ( 29 ) ಸಾವನ್ನಪ್ಪಿರುವ ಚಾಲಕ ಎಂದು ತಿಳಿದು ಬಂದಿದೆ. ಚಿಕ್ಕೋಡಿ ಪಟ್ಟಣದ ಹೊರವಲಯದ ಹಿರೇಕುಡಿಯ ರಾಯಲ ಲೇಔಟ್‌ನಲ್ಲಿ ರಾತ್ರಿ ಒಂದು ಗಂಟೆ ಸುಮಾರಿಗೆ ಆನಂದ ಟಿಪ್ಪರ್ ವಾಹನದ ಮೂಲಕ ಮುರುಮ ವಗಿಯುವ ಕೆಲಸ ಮಾಡುತ್ತಿದ್ದರು. ಇದೇ ಸಂದರ್ಭದಲ್ಲಿ ಲೇಔಟ್ ನಲ್ಲಿ ಇರುವ ಹೆಸ್ಕಾಂನ ವಿದ್ಯುತ್ ತಂತಿ ಟಿಪ್ಪರ್‌ಗೆ ತಗುಲಿ, ವಿದ್ಯುತ್ ಶಾಕ್ ನಿಂದ ಚಾಲಕ ಸಾವನ್ನಪ್ಪಿದಾನೆ.
ಈ ಸಂದರ್ಭದಲ್ಲಿ ಟಿಪ್ಪರ್ ವಾಹನದಲ್ಲಿನ ಗಾಲಿಗಳು ಸಹ ಸುಟ್ಟು ಕರಕಲಾಗಿವೆ. ಲೇಔಟ್ನಲ್ಲಿ ವಿದ್ಯುತ್ ತಂತಿಗಳು ಕೇವಲ 8 ರಿಂದ 10 ಫೀಟ್ ಮಾತ್ರ ಎತ್ತರವಿದೆ. ಈ ಲೇಔಟ್ ನಲ್ಲಿ ಹೆಸ್ಕಾಂನ ಯಾವುದೇ ಪರ್ಮಿಷನ್ ತೆಗೆದುಕೊಂಡಿಲ್ಲ. ಈ ಘಟನೆ ಹೆಸ್ಕಾಂ ಹಾಗೂ ಲೇಔಟ್ ಮಾಲೀಕನ ತಪ್ಪಿನಿಂದ ಆಗಿದ್ದು, ಇವರ ಮೇಲೆ ಎಫ್ ಐ ಆರ್ ದಾಖಲಿಸಿ ನ್ಯಾಯವನ್ನು ಒದಗಿಸಿಕೊಡಬೇಕು ಎಂದು ಕುಟುಂಬಸ್ಥರು ಒತ್ತಾಯಿಸಿದಾರೆ.
ಮೃತ ಆನಂದನಿಗೆ ಪತ್ನಿ, ಇಬ್ಬರು ಚಿಕ್ಕ ಮಕ್ಕಳು ಇದ್ದು,ಬಡತನದ ಪರಿಸ್ಥಿತಿ ಇದೆ. ಈ ಕುರಿತು ಚಿಕ್ಕೋಡಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
PublicNext
30/11/2024 02:19 pm