ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಲಹೊಂಗಲ: ಅಪರಿಚಿತ ವಾಹನ ಡಿಕ್ಕಿ- ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ಸಾವು

ಬೈಲಹೊಂಗಲ: ಅಪರಿಚಿತ ವಾಹನ ಡಿಕ್ಕಿಯಾದ ಪರಿಣಾಮ ದ್ವಿಚಕ್ರ ವಾಹನ ಸವಾರನೋರ್ವ ಸ್ಥಳದಲ್ಲಿಯೇ ಮೃತ ಪಟ್ಟ ಘಟನೆ ಸಮೀಪದ ಮುರಗೋಡ ಹಲಕಿ ಕ್ರಾಸ್ ರಸ್ತೆಯಲ್ಲಿ ಭಾನುವಾರ ಸಂಭವಿಸಿದೆ.

ಮೃತ ವ್ಯಕ್ತಿಯನ್ನು ತಾಲೂಕಿನ ಮದನಭಾವಿ ಗ್ರಾಮದ ಮಲ್ಲಿಕಾರ್ಜುನ ಯಲ್ಲಪ್ಪ ಹೊಂಗಲ(38) ಎಂದು ಗುರುತಿಸಲಾಗಿದೆ.

ದ್ವಿಚಕ್ರ ವಾಹನ ಸವಾರನು ಹಲಕಿ ಕ್ರಾಸ್ ದಿಂದ ಮುರಗೋಡಕ್ಕೆ ಬರುವಾಗ ಈ ಅಪಘಾತ ಘಟಿಸಿದೆ. ಸ್ಥಳಕ್ಕೆ ಸಿಪಿಐ ಐ.ಎಂ. ಮಠಪತಿ, ಪಿಎಸ್ಐ ವಾಹಿದ ಯಾದವಾಡ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುರಗೋಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Edited By : Manjunath H D
PublicNext

PublicNext

01/12/2024 07:31 pm

Cinque Terre

32.41 K

Cinque Terre

0

ಸಂಬಂಧಿತ ಸುದ್ದಿ