ಅಥಣಿ: ಹೀಗೆ ಸಾವು ಬದುಕಿನ ನಡುವೆ ಹೋರಾಟ ಮಾಡ್ತಿರೋ ಶತಾಯು ವೃದ್ಧೆ , ಮನೆ ತುಂಬಾ ಮಕ್ಕಳು,.. ಕೈಯಲ್ಲಿ ಕೆಲಸ ಇಲ್ಲ, ನಿಲ್ಲೋಕೆ ಮನೆಯಿಲ್ಲ ಕೂಲಿ ಕೆಲಸ ಮಾಡಿ ಮನೆ ಕಟ್ಟಿಕೊಳ್ಳುವ ಶಕ್ತಿ ನನಗಂತೂ ಇಲ್ವೇ ಇಲ್ಲ ದಯವಿಟ್ಟು ನಮಗೆ ಒಂದು ಮನೆ ಕಟ್ಟಿ ಕೊಡಿ ಎಂದು ಕೈ ಮುಗಿದು ಬೇಡಿಕೊಳ್ಳುತ್ತಿರುವ ಮಹಿಳೆ.
ಈ ದೃಶ್ಯ ಕಂಡು ಬಂದಿದ್ದು ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಜಂಬಗಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲ್ಲೂತ್ತಿ ಅನ್ನೋ ಗ್ರಾಮದಲ್ಲಿ , ಶೈಲಾ ಪಿಂಟು ವಾಯದಂಡೆ ಕುಟುಂಬಕ್ಕೆ ನಿಲ್ಲಲು ಸೂರಿಲ್ಲ, ಸ್ಥಳೀಯ ಅಧಿಕಾರಿಗಳ ನಿರ್ಲಕ್ಷಕ್ಕೆ ದಲಿತ ಕುಟುಂಬ ಇವತ್ತು ಮೂಲಭೂತ ಸೌಕರ್ಯದಿಂದ ವಂಚಿತವಾಗಿದೆ.
ಕಳೆದ ಆರು ದಶಕಗಳ ಹಿಂದೆ ಕಟ್ಟಿದ ಕಲ್ಲಿನ ಗೋಡೆ ಬೀಳುವ ಹಂತಕ್ಕೆ ತಲುಪಿದೆ. ಹಲವು ಬಾರಿ ಸ್ಥಳೀಯ ಚುನಾಯಿತ ಪ್ರತಿನಿಧಿಗಳು ಹಾಗೂ ಅಭಿವೃದ್ಧಿ ಅಧಿಕಾರಿಗೆ ಮನೆ ನೀಡುವಂತೆ ಮನವಿ ಸಲ್ಲಿಸಿದರು ಗಮನಹರಿಸುತ್ತಿಲ್ಲ ಎಂದು ಮಹಿಳೆ ಶೈಲಾ ವಾಯದಂಡೆ ಗ್ರಾಮ ಪಂಚಾಯಿತಿ ವಿರುದ್ಧ ಕಿಡಿ ಕಾರಿದ್ದಾರೆ.ನಮ್ಮ ಅಜ್ಜಿಯ ಬದುಕಿನ ಕೊನೆ ಘಳಿಗೆಯಲ್ಲಾದರೂ ಮನೆ ನೀಡಿ ಎಂದು ಮಹಿಳೆ ಕೈಮುಗಿದು ಬೇಡಿಕೊಂಡಿದ್ದಾಳೆ.
PublicNext
02/12/2024 10:42 am