ಬೆಳಗಾವಿ: 31 ವಾರಗಳ ಕಠಿಣ ತರಬೇತಿಯನ್ನು ಪೂರೈಸಿದ 651 ಅಗ್ನಿವೀರ ಯೋಧರ ಘಟಿಕೋತ್ಸವ ಹಾಗೂ ಪ್ರಮಾಣ ವಚನ ಸ್ವೀಕಾರ ಸಮಾರಂಭವು ಅದ್ಧೂರಿಯಾಗಿ ನಡೆಯಿತು.
ಬೆಳಗಾವಿಯ ಮರಾಠಾ ಲೈಟ್ ಇನ್‌ಫೆಂಟ್ರಿ ರೆಜಿಮೆಂಟಲ್ ಸೆಂಟರ್‌ನಲ್ಲಿ ಅಗ್ನಿವೀರರ ನಾಲ್ಕನೇಯ ಬ್ಯಾಚ್ ನ ಪ್ರಮಾಣ ವಚನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮರಾಠಾ ಲೈಟ್ ಇನ್‌ಫೆಂಟ್ರಿ ರೆಜಿಮೆಂಟಲ್ ಸೆಂಟರ್ ಕಮಾಂಡೆಂಟ್ ಬ್ರಿಗೇಡಿಯರ್ ಜೋಯ್ದೀಪ್ ಮುಖರ್ಜಿ ಉಪಸ್ಥಿತರಿದ್ದರು.
ತರಬೇತಿ ಪೂರ್ಣಗೊಳಿಸಿದ ಅಗ್ನಿವೀರರು ತ್ರಿವರ್ಣ ಧ್ವಜ, ರೆಜಿಮೆಂಟಲ್ ಧ್ವಜದ ಸಾಕ್ಷಿಯಾಗಿ ಹಾಗೂ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಪ್ರಮಾಣ ವಚನ ಸ್ವೀಕರಿಸಿದ ಬಳಿ ಛತ್ರಪತಿ ಶಿವಾಜಿ ಮಹಾರಾಜರು ಹಾಗೂ ಭಾರತ ಮಾತೆಯ ಪರ ಜಯ ಘೋಷಣೆ ಕೂಗಲಾಯಿತು. ಈ ಸಂದರ್ಭದಲ್ಲಿ ಸೇನಾ ಬ್ಯಾಂಡ್ ದೇಶಭಕ್ತಿ ಗೀತೆಯನ್ನು ಪ್ರಸ್ತುತಪಡಿಸುವ ಮೂಲಕ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.
ಬ್ರಿಗೇಡಿಯರ್ ಜೋಯ್ದೀಪ್ ಮುಖರ್ಜಿ ಅವರು ತರಬೇತಿ ಅವಧಿಯಲ್ಲಿ ಅವರ ಅತ್ಯುತ್ತಮ ಪ್ರದರ್ಶನಕ್ಕಾಗಿ ಸಾಹಿಲ್ ಶಿಂಧೆ ಅವರಿಗೆ ಅತ್ಯುತ್ತಮ ಅಗ್ನಿಶಾಮಕ ಪ್ರಶಸ್ತಿಯನ್ನು ನೀಡಿದರು.
ಪ್ರಮಾಣ ನಂತರ ಯುದ್ದದಲ್ಲಿ ಮಡಿದ ಹುತಾತ್ಮ ಯೋಧರ ಸ್ಮಾರಕಕ್ಕೆ ಗಣ್ಯರು ನಮನ ಸಲ್ಲಿಸಿದರು. ಸರ್ವಶ್ರೇಷ್ಠ ಪ್ರದರ್ಶನ ನೀಡಿದ ಅಗ್ನಿವೀರರ ಪೋಷಕರಿಗೆ ಸನ್ಮಾನಿಸಿ, ಗೌರವಿಸಲಾಯಿತು.
PublicNext
04/12/2024 12:47 pm