ಅಥಣಿ: ಕಳೆದ ಎರಡು ತಿಂಗಳಿಗಳಿಂದ ಶಾಲಾ ವಿದ್ಯಾರ್ಥಿಗಳಿಗೆ ಕೋತಿಗಳು ಕಾಟ ನೀಡುತ್ತಿದ್ದು ಮಕ್ಕಳು ಭಯದಿಂದ ಶಾಲೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ.
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಶೆಗುಣಸಿ ಗ್ರಾಮದ ಶ್ರೀ ಮುರುಘೇಂದ್ರ ಸ್ವಾಮೀಜಿ ಶಿಕ್ಷಣ ಸಂಸ್ಥೆಗೆ ಈಗ ಕೋತಿಗಳಿಂದ ಕಂಟಕ ಎದುರಾಗಿದ್ದು ಶಾಲಾ ವಿದ್ಯಾರ್ಥಿಗಳಿಗೆ ದಿನನಿತ್ಯವು ಪೀಡಿಸುತ್ತಿವೆ.
ಪ್ರೈಮರಿ ಹೈಸ್ಕೂಲ್ ಸೆರಿ 300ಕ್ಕೂ ಹೆಚ್ಚು ಮಕ್ಕಳಿರುವ ಶಾಲೆಯಲ್ಲಿ ಕಳೆದ ಎರಡು ತಿಂಗಳಿಂದ ದಾಂಗುಡಿ ಇಡುತ್ತಿರುವ ಕೋತಿಗಳು ಮಕ್ಕಳ ವಿದ್ಯಾಭ್ಯಾಸಕ್ಕೆ ತೊಡಕು ತಂದಿವೆ.
ಈ ಸಂಬಂಧ ಅಥಣಿ ಅರಣ್ಯ ಇಲಾಖೆ ಗಮನಕ್ಕೆ ತಂದರೂ ಅಧಿಕಾರಿಗಳು ನಿರ್ಲಕ್ಷ ಧೋರಣೆ ತೋರುತ್ತಿದ್ದಾರೆ ಎಂದು ಆಡಳಿತ ಮಂಡಳಿ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಕೋತಿಗಳ ಕಾಟದಿಂದ ಅಳುಕುತ್ತಲೇ ಶಾಲೆಗೆ ಬರುತ್ತಿರುವ ಶಾಲಾ ಶಿಕ್ಷಕರಿಗೆ ಹಾಗೂ ಮಕ್ಕಳಿಗೆ ಮುಕ್ತಿ ದೊರಕುತ್ತಾ ಅಂತಾ ಕಾದು ನೋಡಬೇಕಿದೆ.
PublicNext
04/12/2024 10:04 pm