ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 12ನೇ ವಾರ್ಷಿಕ ಘಟಿಕೋತ್ಸವ

ಬೆಳಗಾವಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಡಾ. ಎಪಿಜೆ ಅಬ್ದುಲ್ ಕಲಾಂ "ಜ್ಞಾನ ಸಂಗಮ" ಸಭಾಂಗಣದಲ್ಲಿ ಇಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 12ನೇ ವಾರ್ಷಿಕ ಘಟಿಕೋತ್ಸವ ಸಮಾರಂಭ ನಡೆಯಿತು.

ಇಂದು ನಡೆದ ಘಟಿಕೋತ್ವದಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾನಿಲಯದ ಪ್ರತಿಷ್ಠಿತ ಪದವಿಗಳನ್ನು ಪಡೆದ ಎಲ್ಲಾ ಪದವೀಧರರು, ಸ್ನಾತಕೋತ್ತರ ಪದವೀಧರರು, ಡಾಕ್ಟರೇಟ್‌ಗಳಿಗೆ ಇಂದು ಉತ್ತಮ ದಿನವಾಗಿತ್ತು.

ಮೂವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು. ಪ್ರದರ್ಶನ ಕಲೆಗಳ ಕ್ಷೇತ್ರದಲ್ಲಿ ಪದ್ಮಶ್ರೀ ಪಂಡಿತ್ ಎಸ್. ಬಾಲೇಶ್ ಭಜಂತ್ರಿ, ಉದ್ಯಮಶೀಲತೆ ಮತ್ತು ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಗೋಪಾಲ ದೇವೇಂದ್ರ ಜಿನಗೌಡ ಹಾಗೂ ನಾಗರಿಕ, ಕ್ರೀಡೆ, ಲೋಕೋಪಕಾರಿ ಸೇವಾ ಕ್ಷೇತ್ರದಲ್ಲಿ ಗೋಪಾಲ ಬಿ. ಹೊಸೂರ ಇವರುಗಳಿಗೆ 'ಡಾಕ್ಟರ್ ಆಫ್ ಲೆಟರ್ಸ್' ಗೌರವ ಡಾಕ್ಟರೇಟ್ ಪದವಿಯನ್ನು ಪ್ರದಾನ ಮಾಡಲಾಯಿತು.

ಘಟಿಕೋತ್ಸವದಲ್ಲಿ ಒಟ್ಟು 38,512 ವಿದ್ಯಾರ್ಥಿಗಳು ಪದವಿ ಮತ್ತು 5909 ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡರು. ಇದರಲ್ಲಿ ಎಂ.ಎ(ಕನ್ನಡ) ವಿಷಯದಲ್ಲಿ ರ್‍ಯಾಂಕ್‌ ಗಳಿಸಿದ ಮತ್ತು ವಿಷಯವಾರು ಹೆಚ್ಚಿನ ಅಂಕ ಪಡೆದ ಮಹೇಶ್ವರಿ ತೇಗೂರ ಎರಡು ಚಿನ್ನದ ಪದಕಗಳು, ಬಿ.ಕಾಂ ವಿನಾಯಕ ತೇಲಿ, ಬಿ.ಎಸ್ಸಿ ಕುಮಾರೇಶ ಕಾತರಕಿ, ಎಂ.ಎ(ಸಮಾಜಶಾಸ್ತ್ರ) ವಿಷಯದಲ್ಲಿ ಐಶ್ವರ್ಯಾ ಪಾಟೀಲ, ಎಂಬಿಎ ಪೂರ್ಣಿಮಾ ದೇಸಾಯಿ, ಎಂ.ಎಸ್ಸಿ(ಗಣಿತ) ವಿಷಯದಲ್ಲಿ ಶಿವಕುಮಾರ ಸರದಾರ ಹಾಗೂ ವಿಷಯವಾರು ಹೆಚ್ಚಿನ ಅಂಕ ಗಳಿಸಿದ ವಿನಯ ಘೂಳಪ್ಪನವರ, ಸುಜಾತಾ ಕೇಸ್ತಿ, ನಿವೇದಿತಾ ಕಾಟಕರ, ಸಂಗೀತಾ ಬಸಗೌಡನವರ ಅವರಿಗೆ ತಲಾ ಒಂದು ಚಿನ್ನದ ಪದಕ ವಿತರಿಸಲಾಯಿತು.

ಅದೇ ರೀತಿಯಲ್ಲಿ 123 ಪಿಎಚ್.ಡಿ. ಪದವಿಗಳನ್ನು ಪ್ರದಾನ ಮಾಡಲಾಯಿತು. ಬಳಿಕ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಇ-ವಿದ್ಯಾ ಅಪ್ಲಿಕೇಶನ್ ಬಿಡುಗಡೆ ಮಾಡಲಾಯಿತು.

ವಿಶ್ವವಿದ್ಯಾಲಯದ ಸಮಕುಲಾಧಿಪತಿಗಳು ಹಾಗೂ ಉನ್ನತ ಶಿಕ್ಷಣ ಸಚಿವರಾದ ಡಾ. ಎಂ.ಸಿ. ಸುಧಾಕರ್, ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸಿ.ಎಂ.ತ್ಯಾಗರಾಜ್, ಕುಲಸಚಿವ ಸಂತೋಷ ಕಾಮಗೌಡ, ಮೌಲ್ಯಮಾಪನ ಕುಲಸಚಿವ ಪ್ರೊ. ರವೀಂದ್ರ ಎನ್. ಕದಮ್, ಹಣಕಾಸು ಅಧಿಕಾರಿ ಎಂ.ಎ ಸ್ವಪ್ನ, ಬೋಧಕ ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳ, ಪಾಲಕರು ಘಟಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

Edited By : Vinayak Patil
PublicNext

PublicNext

03/12/2024 05:57 pm

Cinque Terre

14.75 K

Cinque Terre

0

ಸಂಬಂಧಿತ ಸುದ್ದಿ