ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಲಹೊಂಗಲ: ಹೆಸ್ಕಾಂ ನಿರ್ಲಕ್ಷ್ಯದಿಂದ ಲಕ್ಷಾಂತರ ಮೌಲ್ಯದ ಕಬ್ಬು ಬೆಂಕಿಗಾಹುತಿ- ಪರಿಹಾರಕ್ಕೆ ರೈತ ಒತ್ತಾಯ

ಬೈಲಹೊಂಗಲ: ಮುರಿದು ಬೀಳುವ ಸ್ಥಿತಿಯಲ್ಲಿದ್ದ ವಿದ್ಯುತ್ ಕಂಬಗಳ ಜೋತು ಬಿದ್ದ ತಂತಿ, ಕಟಾವಿಗೆ ಬಂದಿದ್ದ ಕಬ್ಬಿಗೆ ತಾಗಿ ಬೆಂಕಿ ಹೊತ್ತಿ ಅಪಾರ ಪ್ರಮಾಣದ ಕಬ್ಬು ನಾಶವಾಗಿದೆ. ಇದಕ್ಕೆಲ್ಲ ಹೆಸ್ಕಾಂ ನಿರ್ಲಕ್ಷ್ಯವೇ ಕಾರಣ ಎಂದು ನಷ್ಷಕ್ಕೊಳಗಾದ ತಾಲೂಕಿನ ಉಡಿಕೇರಿ ಗ್ರಾಮದ ರೈತ ಮಹಾಂತೇಶ ಗೂಳಪ್ಪನವರ ಹೆಸ್ಕಾಂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತೀರಾ ಹಳತಾಗಿರುವ ವಿದ್ಯುತ್ ಕಂಬಗಳನ್ನು ತೆಗೆದು ಹೊಸ ಕಂಬಗಳನ್ನು ಹಾಕಲು ಸತತ ಎರಡು ವರ್ಷಗಳಿಂದಲೂ ಹೆಸ್ಕಾಂ ಅಧಿಕಾರಿಗಳಿಗೆ ಲಿಖಿತ ಮನವಿ ಕೊಟ್ಟರೂ ಸ್ಪಂದಿಸದೆ ದೊಡ್ಡ ಅನಾಹುತಕ್ಕೆ ಕಾರಣರಾಗಿದ್ದಾರೆ. ಕಬ್ಬಿನ ಹೊಲದ ಪಕ್ಕದಲ್ಲೇ ಪೆಟ್ರೋಲ್ ಬಂಕ್ ಇದೆ. ಸ್ವಲ್ಪ ಎಚ್ಚರ ತಪ್ಪಿದರೂ 18 ಎಕರೆ ಕಬ್ಬಿಗೆ ತಾಗಿದ ಭಾರಿ ಪ್ರಮಾಣದ ಬೆಂಕಿ ಅರ್ಧ ಊರೇ ಹೊತ್ತಿಕೊಳ್ಳುವ ಆತಂಕವಿತ್ತು!

ಬೆಂಕಿ ನಂದಿಸಲು ಗ್ರಾಮದ ನೂರಾರು ಜನರ ಸಹಕಾರ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಪರಿಶ್ರಮದಿಂದ ಸ್ವಲ್ಪದರಲ್ಲೇ ದೊಡ್ಡ ಅವಘಡ ತಪ್ಪಿದೆ. ಆಕಸ್ಮಾತ್ ಹೆಚ್ಚು ಕಡಿಮೆಯಾಗಿದ್ದರೆ ಏನು ಗತಿ? ಇದಕ್ಕೆಲ್ಲ ಹೆಸ್ಕಾಂನವರೇ ನೇರ ಹೊಣೆ. ನಮಗಾದ ಲಕ್ಷಾಂತರ ರೂಪಾಯಿ ನಷ್ಟವನ್ನು ಹೆಸ್ಕಾಂನವರೇ ಭರಿಸಿಕೊಡಬೇಕು ಎಂದು ಅವರು ಹೆಸ್ಕಾಂ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

Edited By : Ashok M
PublicNext

PublicNext

01/12/2024 07:40 am

Cinque Terre

32.94 K

Cinque Terre

0

ಸಂಬಂಧಿತ ಸುದ್ದಿ