ಅಥಣಿ: ಅಥಣಿ ತಾಲೂಕಿನ ಮದಬಾವಿ ಗ್ರಾಮದ ಭಜಂತ್ರಿ ಕಾಲೋನಿಯಲ್ಲಿ ಕಳೆದ ಮೂರು ವರ್ಷಗಳಿಂದ ಚರಂಡಿ ವ್ಯವಸ್ಥೆ ಹದಗೆಟ್ಟಿದೆ. ಸ್ಥಳೀಯ ಗ್ರಾಮ ಪಂಚಾಯತ್‌ಗೆ ಮನವಿ ಸಲ್ಲಿಸಿದರೂ ಕ್ಯಾರೇ ಅನ್ನದ ಅಧಿಕಾರಿಗಳಿಗೆ ಮಹಿಳೆಯರು ಹಿಡಿ ಶಾಪ ಹಾಕಿದ್ದಾರೆ.
ದಿನನಿತ್ಯ ಕೊಳಚೆ ನೀರಿನಿಂದ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಶಾಲಾ ಮಕ್ಕಳು, ವಯೋ ವೃದ್ಧರು ಮೂಲಭೂತ ಸೌಕರ್ಯಕ್ಕಾಗಿ ಪರದಾಡುವಂತಾಗಿದೆ. ಗಬ್ಬೆದ್ದ ಚರಂಡಿಯಿಂದ ಜನರಿಗೆ ಮುಕ್ತಿ ಇಲ್ಲದಂತಾಗಿದೆ. ಶೀಘ್ರವೇ ಚರಂಡಿ ಅಭಿವೃದ್ಧಿಗೊಳಿಸುವಂತೆ ಮಹಿಳೆಯರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.
PublicNext
02/12/2024 08:41 pm