ದಾವಣಗೆರೆ: ಪಂಚಮಸಾಲಿ ಹೋರಾಟದ ದಿಕ್ಕು ತಪ್ಪಿಸುವ ಕೆಲಸ ಯಾರೂ ಮಾಡಬಾರದು ಎಂದು ಪರೋಕ್ಷವಾಗಿ ವಿಜಯಾನಂದ ಕಾಶ್ಯಪ್ಪನವರ್ ಗೆ ದಾವಣಗೆರೆಯಲ್ಲಿ ಮಾಜಿ ಶಾಸಕ ಎಚ್.ಎಸ್.ಶಿವಶಂಕರ್ ಹೇಳಿದರು.
ಸಮಾಜದ ಒಳಿತಿಗಾಗಿ ಹೋರಾಟ ಎಂದು ಪರಿಗಣಿಸಬೇಕು. 2ಎ ಮೀಸಲಾತಿಗೆ ಹೋರಾಟ ಅಷ್ಟೇ, ಇದು ರಾಜಕೀಯಕ್ಕೆ ಅಲ್ಲ. ಹೋರಾಟದ ತೀವ್ರತೆಗೆ ತಣ್ಣೀರು ಎರಚಬೇಡಿ. ಸ್ವಾಮೀಜಿ ನಿರಂತರವಾಗಿ ಪೀಠ ಬಿಟ್ಟು ಹೋರಾಟ ಮಾಡುತ್ತಿದ್ದಾರೆ ಎಂದರು.
ಸ್ವಾಮೀಜಿಯೊಬ್ಬರ ಬಗ್ಗೆ ಅಪನಂಬಿಕೆ ಬೇಡ. ನಂಬಿಕೆ ಇಡಿ. ಸ್ವಾಮೀಜಿ ಅವರಿಗೆ ಕಳಕಳಿ ಇದೆ, ಬದ್ಧತೆ ಇದೆ. ಕಾಶ್ಯಪ್ಪನವರ್ ಈ ಹೋರಾಟದಲ್ಲಿ ಪಾಲ್ಗೊಳ್ಳೋದಿಲ್ಲ ಎಂದು ಸಭೆ ಮಾಡಿದ್ದಾರೆ. ಯಾರು ಎಲ್ಲೇ ಏನೇ ಮಾತನಾಡಿದರೂ ಹತ್ತನೇ ತಾರೀಕು ಹೋರಾಟಕ್ಕೆ ಬನ್ನಿ ಎಂದು ಕರೆ ನೀಡಿದರು.
ಬಿಜೆಪಿ ಸರ್ಕಾರ ಇದ್ದಾಗ ಕಾಶ್ಯಪ್ಪನವರ್ ಹೋರಾಟ ಮಾಡಿ ತೀಕ್ಷ್ಣವಾಗಿ ಮಾತನಾಡಿದ್ದರು. ಬಿಜೆಪಿ 2D ಕೊಡಲು ಮುಂದಾಗಿತ್ತು. ಆದರೆ, ಕಾಂಗ್ರೆಸ್ ಸರ್ಕಾರ ಬಂದಾಗ ಮೀಸಲಾತಿ ಬಗ್ಗೆ ಧ್ವನಿ ಎತ್ತುತ್ತಿಲ್ಲ! ಪಂಚಮಸಾಲಿ ವಿಚಾರದಲ್ಲಿ ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ ಏಕೆ? ಹೋರಾಟಕ್ಕೆ ಮುಂಚೆ ಸರ್ಕಾರ ಸ್ವಾಮೀಜಿ ಅವರನ್ನು ಆಹ್ವಾನಿಸಿ ಸಭೆ ಕರೆಯಬೇಕು. ಸಭೆಯಲ್ಲಿ ಮೀಸಲಾತಿ ಬಗ್ಗೆ ಚರ್ಚೆಯಾಗಿ ಜಾರಿಗೊಳಿಸಬೇಕು ಎಂದು ಶಿವಶಂಕರ್ ಹೇಳಿದರು.
PublicNext
27/11/2024 08:07 pm