ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ: "ಜಮೀರ್‌ ಒಬ್ಬ ಮತಾಂಧ, ಕಾಂಗ್ರೆಸ್‌ ಆಡಳಿತದಲ್ಲಿ ಹಿಂದೂಗಳಿಗೆ ರಕ್ಷಣೆ ಇಲ್ಲ!"- ರೇಣುಕಾಚಾರ್ಯ

ದಾವಣಗೆರೆ : ‘ಮುಸ್ಲಿಮರು ಮಾರಕಾಸ್ತ್ರ ಸಂಗ್ರಹಿಸಲೆಂದೇ ಬೆಟ್ಟ, ಕಾಡುಗಳಲ್ಲಿ ಮದರಸ ಕಟ್ಟುತ್ತಾರೆ. ಮದರಸಗಳಲ್ಲಿ ಮಕ್ಕಳಿಗೆ ಹಿಂದೂಗಳ ವಿರುದ್ಧ ಪ್ರಚೋದನೆ ನೀಡುವಂತಹ ಬೋಧನೆ ಮಾಡಲಾಗುತ್ತದೆ’ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹರಿಹಾಯ್ದರು.

‘ಸಚಿವ ಜಮೀರ್‌ ಒಬ್ಬ ಮತಾಂಧ. ಆತ ಮಠ- ಮಂದಿರಗಳು ಹಾಗೂ ರೈತರ ಆಸ್ತಿ ನುಂಗಲು ಮುಂದಾಗಿದ್ದಾನೆ. ಕಾಂಗ್ರೆಸ್‌ ಸರ್ಕಾರ ಇರುವವರೆಗೂ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲ’ ಎಂದು ವಕ್ಫ್‌ ಮಂಡಳಿಯ ವಿರುದ್ಧ ಜಿಲ್ಲಾ ಬಿಜೆಪಿ ಆಯೋಜಿಸಿದ್ದ ಪ್ರತಿಭಟನೆ ವೇಳೆ ಮಾಧ್ಯಮದವರೊಂದಿಗೆ ರೇಣುಕಾಚಾರ್ಯ ಮಾತನಾಡಿದರು.

‘ಹಿಂದಿನ ಕಾಂಗ್ರೆಸ್ ನಾಯಕರು ಕರಾಳ ವಕ್ಫ್ ಕಾನೂನು ತಂದರು. ಸಾವಿರಾರು ವರ್ಷಗಳ ಹಿಂದೆಯೇ ಸನಾತನ ಧರ್ಮ ಇತ್ತು. ಮುಸ್ಲಿಂ ಧರ್ಮ ಇತ್ತೀಚೆಗೆ ಹುಟ್ಟಿದೆ. ಕಾಶಿ, ಅಯೋಧ್ಯೆ, ಮಥುರಾ ಇವೆಲ್ಲ ಪವಿತ್ರ ದೇವಸ್ಥಾನಗಳು. ಇವುಗಳ ಬಗ್ಗೆ ಸಾಕ್ಷ್ಯ ಕೇಳುವ ಕಾಂಗ್ರೆಸ್‌ ನಾಯಕರಿಗೆ ತಂದೆ –ತಾಯಿ ಇವರೇ ಎನ್ನುವುದಕ್ಕೆ ಸಾಕ್ಷ್ಯ ಇದೆಯಾ’ ಎಂದು ಪ್ರಶ್ನಿಸಿದರು.

Edited By : Nagesh Gaonkar
PublicNext

PublicNext

23/11/2024 08:02 am

Cinque Terre

16.56 K

Cinque Terre

2

ಸಂಬಂಧಿತ ಸುದ್ದಿ