ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ : ಕಳಪೆ ರಸ್ತೆ ಕಾಮಗಾರಿ ಕೆಲಸ ನಿಲ್ಲಿಸುವಂತೆ ಒತ್ತಾಯ....

ದಾವಣಗೆರೆ : ಕಳಪೆ ರಸ್ತೆ ಕಾಮಗಾರಿ ಕೆಲಸ ನಿಲ್ಲಿಸುವಂತೆ ಒತ್ತಾಯಿಸಿ ಸಾರ್ವಜನಿಕರು ದಾವಣಗೆರೆ ಜಿಲ್ಲೆಯ ಹೊನ್ನಾಳಿ ನ್ಯಾಮತಿ ಅವಳಿ ತಾಲೂಕಿನ ಹುಣಸೆಹಳ್ಳಿ ಕೈಮರ ಮತ್ತು ಹನಗವಾಡಿ ಮಧ್ಯದ ಕಾಮಗಾರಿ ತಡೆದು ಪ್ರತಿಭಟನೆ ಮಾಡಿದರು.

ಹುಣಸೆಹಳ್ಳಿ ಕೈಮರದಿಂದ, ಹನಗವಾಡಿ ಗ್ರಾಮದ ಬಸ್ ನಿಲ್ದಾಣದವರೆಗಿನ ರಸ್ತೆ ಗುಣಮಟ್ಟದ ಕಾಮಗಾರಿ ನಡೆಯುತ್ತಿಲ್ಲ ಎಂದು ಆರೋಪಿಸಿದ ಸಾರ್ವಜನಿಕರು ಇಂಜಿನಿಯರ್ ಗಳು ಕಾಮಗಾರಿ ನಡೆಯುವ ಸ್ಥಳದಲ್ಲಿದ್ದು ಗುಣಮಟ್ಟದ ಕಾಮಗಾರಿ ಮಾಡಿಸುವಂತೆ ಒತ್ತಾಯ ಮಾಡಿದರು.

ಕಾಮಗಾರಿ ಸ್ಥಳದಲ್ಲಿ ಸುರಕ್ಷತೆಯ ಸೂಚನಾ ಫಲಕ ಅಳವಡಿಕೆ ಮಾಡಿಲ್ಲ. ಸುರಕ್ಷತೆ ಕ್ರಮದ ನಿಯಮ ಪಾಲನೆ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.20 ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗುತ್ತಿರುವ ರಸ್ತೆ, ರಸ್ತೆ ಬದಿಯಲ್ಲಿನ ಅಡಿಕೆ ಸಿಪ್ಪೆ ತೆರವು ಮಾಡದೆ ರಸ್ತೆ ಅಗಲೀಕರಣ ಮಾಡುತ್ತಿದ್ದಾರೆ,ಅಗಲೀಕರಣದಲ್ಲಿ ರಸ್ತೆಯಲ್ಲಿ ವಿದ್ಯುತ್ ಕಂಬಗಳು ಬರುತ್ತಿವೆ, ಅವುಗಳನ್ನು ಸ್ಥಳಾಂತರ ಮಾಡಿಲ್ಲ ಎಂದರು.

ರಸ್ತೆ ಮೇಲಿದ್ದ ಹಳೆಯ ಡಾಂಬರ್ ಕಿತ್ತು ನೇರವಾಗಿ ವೆಟ್ ಮಿಕ್ಸ್ ರಸ್ತೆಗೆ ಹಾಕುತ್ತಿದ್ದಾರೆ.ಡಾಂಬರ್ ಸಹ ತೆಳುವಾಗಿ ಹಾಕುತ್ತಿದ್ದು, ಗುತ್ತಿಗೆದಾರ ನಿಯಮ ಪಾಲಿಸದೆ ಕಾಮಗಾರಿ ನಡೆಸುತ್ತಿದ್ದಾರೆ. ಈ ಕೂಡಲೇ ಕಾಮಗಾರಿ ನಿಲ್ಲಿಸಿ, ನಿಯಮಗಳು ಪಾಲನೆ ಮಾಡಿ ಕೆಲಸ ಆರಂಭಿಸಿ ಎಂದು ಒತ್ತಾಯಿಸಿದ ಸಾರ್ವಜನಿಕರು.

Edited By : Shivu K
PublicNext

PublicNext

03/12/2024 07:07 pm

Cinque Terre

15.36 K

Cinque Terre

0