ದಾವಣಗೆರೆ : ಆಸ್ತಿ ವಿಚಾರಕ್ಕೆ ಸುಪಾರಿ ಕೊಟ್ಟು ತಮ್ಮನನ್ನೇ ಅಣ್ಣ ಮತ್ತು ಆತನ ಕುಟುಂಬ ಕೊಲೆ ಮಾಡಿಸಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ. 55 ವರ್ಷದ ಸಿದ್ದಲಿಂಗಪ್ಪ ಕೊಲೆಯಾದ ದುರ್ದೈವಿ. ಸಿದ್ದಲಿಂಗಪ್ಪನ ಅಣ್ಣ ಶಿವಮೂರ್ತಪ್ಪ ಮತ್ತು ಆತನ ಮಗ ಸತೀಶ್ ಕೊಲೆ ಮಾಡಿಸಿದ ಆರೋಪಿಗಳು.
ಬೋರ್ ವೆಲ್ ಪಾಯಿಂಟ್ಸ್ ನೋಡಲು ಹೋದ ಸಿದ್ದಲಿಂಗಪ್ಪ ಕಾಲುವೆಯಲ್ಲಿ ಹೆಣವಾಗಿ ಪತ್ತೆಯಾಗಿದ್ದಾನೆ. ಆಸ್ತಿ ಮತ್ತು ಜಾಗದ ವಿಚಾರದಲ್ಲಿ ಸಾಕಷ್ಟು ಸಲ ಸಿದ್ದಲಿಂಗಪ್ಪ ಮತ್ತು ಶಿವಮೂರ್ತಪ್ಪ ಕುಟುಂಬದ ನಡುವೆ ಗಲಾಟೆ ಆಗಿ ರಾಜಿ ಪಂಚಾಯಿತಿ ಸೇರಿದಂತೆ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಕೊನೆಗೆ ಸಿದ್ದಲಿಂಗಪ್ಪನನ್ನು 1 ಲಕ್ಷ ರೂಪಾಯಿಗೆ ಸುಪಾರಿ ನೀಡಿ ಕೊಲೆ ಮಾಡಲು ಶಿವಮೂರ್ತಪ್ಪ, ಸತೀಶ್ ಮತ್ತು ಸುಜಾತಾ ನಿರ್ಧರಿಸಿದ್ದಾರೆ.
ಇನ್ನು ಕೊಲೆ ಆರೋಪದಲ್ಲಿ ಪ್ರಭು ಅಲಿಯಾಸ್ ಮಾಸ್ತಿ, ಪ್ರಶಾಂತ್ ನಾಯ್ಕ ಅಲಿಯಾಸ್ ಪಿಲ್ಲಿ, ಸತೀಶ್, ಸುಜಾತಾ, ಶಿವಮೂರ್ತಪ್ಪರನ್ನು ಅರೆಸ್ಟ್ ಮಾಡಲಾಗಿದೆ. ಈ ಸಂಬಂಧ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
PublicNext
03/12/2024 08:05 pm