ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ : ಆಸ್ತಿ ಕಲಹ, ಕೌಟುಂಬಿಕ ವೈಷಮ್ಯ, ತಂದೆಯನ್ನೇ ಕೊಲೆ ಮಾಡಿದ ಮಗ....!

ದಾವಣಗೆರೆ : ಆಸ್ತಿ ಮತ್ತು ಕೌಟುಂಬಿಕ ವೈಷಮ್ಯ ವಿಚಾರಕ್ಕೆ ತಂದೆಯನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಚನ್ನಗಿರಿ ತಾಲೂಕಿನ ಅಜ್ಜಿಹಳ್ಳಿಯ ಚನ್ನಗಿರಿ - ಶಿವಮೊಗ್ಗ ಹೆದ್ದಾರಿಯಲ್ಲಿ ನಡೆದಿದೆ.

ಅಜ್ಜಿಹಳ್ಳಿಯ ಹನಮಂತಪ್ಪ (50) ಕೊಲೆಯಾದ ವ್ಯಕ್ತಿ. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಅಜ್ಜಿಹಳ್ಳಿಯ ಹನಮಂತಪ್ಪ ಬೈಕ್ ನಲ್ಲಿ ತೋಟಕ್ಕೆ ಹೋಗುವಾಗ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ರಂಗನಾಥ್ ಅಲಿಯಾಸ್ ಮೈಕಲ್ ರಂಗನಾಥ ಹಾಗೂ ಕೊಲೆಯಾದ ವ್ಯಕ್ತಿಯ ಪುತ್ರ ಲಲಿತ್ ಸೇರಿ ಐದು ಜನರಿಂದ ಕೃತ್ಯ ನಡೆದಿದೆ.

ರಂಗನಾಥ್ ಮೃತ ಹನುಮಂತನ ಮೊದಲ ಹೆಂಡತಿ ಆಶಾಳ ಸಹೋದರ, ಲಲಿತ್ ಮೊದಲ ಹೆಂಡತಿಯ ಮಗ. ಹನಮಂತಪ್ಪ 2002 ರಲ್ಲಿ ಆಶಾಳನ್ನ ಮದ್ವೆಯಾಗಿದ್ದ. ಮದುವೆ ನಂತರ ಜಗಳ ಆಗಿ ಹನುಮಂತ ಮತ್ತು ಆಶಾ ಇಬ್ಬರು ಪ್ರತ್ಯೇಕ ಆಗಿದ್ದರು. 2009 ರಲ್ಲಿ ಶೋಭಾ ಎಂಬುವರನ್ನ ಮೃತ ಹನುಮಂತ ಎರಡನೇ ಮದುವೆ ಆಗಿದ್ದ. ಮೊದಲ ಹೆಂಡತಿ ಆಶಾಳ ಸಹೋದರ ರಂಗನಾಥ್ ಹಾಗೂ ಪುತ್ರ ಲಲಿತ್ ಹನುಮಂತಪ್ಪನ ಆಸ್ತಿಯಲ್ಲಿ ಪಾಲು ಕೇಳುತ್ತಿದ್ದರು. ಇದೇ ವಿಚಾರಕ್ಕೆ ಅನೇಕ ಸಲ ಜಗಳ ಆಗಿತ್ತಂತೆ.

ಬೆಳಿಗ್ಗೆ ತೋಟಕ್ಕೆ ಹೋಗುವ ವಿಚಾರ ತಿಳಿದುಕೊಂಡಿದ್ದ ಆರೋಪಿಗಳು ದಾಳಿ ಮಾಡಿ, ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಸ್ಥಳದಲ್ಲೇ ಹನುಮಂತಪ್ಪ ಸಾವನಪ್ಪಿದ್ದಾನೆ. ಈ ಸಂಬಂಧ ಚನ್ನಗಿರಿ ‌ಪೊಲೀಸ್ ಠಾಣೆಯಲ್ಲಿ ‌ಪ್ರಕರಣ ದಾಖಲಾಗಿದೆ.

Edited By : Nagesh Gaonkar
PublicNext

PublicNext

28/11/2024 08:21 pm

Cinque Terre

44.74 K

Cinque Terre

0