ದಾವಣಗೆರೆ : ಆತ ಮತ್ತೊಬ್ಬಳ ಸಹವಾಸದಿಂದ ವಿಷ ನೀಡಿ ಕೈಹಿಡಿದ ಹೆಂಡತಿಯನ್ನೇ ಕೊಂದಿದ್ದ, 10 ವರ್ಷದ ಬಳಿಕ ಇದೀಗ ಕೊಲೆಗಡುಕ ಗಂಡನಿಗೆ ಕೋರ್ಟ್ ಜೀವಾವಧಿ ಶಿಕ್ಷೆ ನೀಡಿ ತಕ್ಕ ಪಾಠ ಕಲಿಸಿದೆ.
ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕು ಅರಳಿಕಟ್ಟೆಯಲ್ಲಿ 2014 ಅಕ್ಟೋಬರ್ 15 ರಂದು ನಡೆದಿದ್ದ ಘಟನೆ. ಶೈಲಜಾ ಮೃತ ದುರ್ದೈವಿ. ಈಕೆಯನ್ನು ಮದುವೆಯಾಗಿದ್ದ ವೈದ್ಯ ಡಾ. ಮಹಾದೇವ್ ಎಂಬಾತನೇ ಕೊಲೆಗಡುಕ. ಬೆಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಈತ ಮದುವೆಯಾಗಿ 3 ತಿಂಗಳಾಗಿತ್ತು. 2014 ಅಕ್ಟೋಬರ್ 15 ರಂದು ತನ್ನ ಹೆಂಡತಿ ಮನೆ ಅರಳಿಕಟ್ಟೆಗೆ ಬಂದಿದ್ದ. ಅಂದು ರಾತ್ರಿ ಸೆವೋಫ್ಲೋರೆನ್ ಎಂಬ ಅನಾಸ್ತೇಷಿಯಾ ಔಷಧ ನೀಡಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದ.
ಅನುಮಾನ ಬಂದ ಹಿನ್ನೆಲೆ ಮೃತಳ ಪೋಷಕರು ಸಂತೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಕೊಲೆ ಆರೋಪದಡಿ ದೂರು ದಾಖಲಿಸಿದ್ದದರು. 10 ವರ್ಷಗಳ ಕಾಲ ನಡೆದ ಸುದೀರ್ಘ ವಿಚಾರಣೆ ಬಳಿಕ ದಾವಣಗೆರೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆರೋಪಿ ಮಹಾದೇವ್‍ಗೆ ಜೀವಾವಧಿ ಶಿಕ್ಷೆ 1 ಲಕ್ಷ ರೂ ದಂಡ ವಿಧದಿಸಿದೆ. ಇದೀಗ ಮೃತ ಶೈಲಜಾ ತಾಯಿ ಚಂದ್ರಮ್ಮ ಸತ್ಯಕ್ಕೆ ಜಯ ಸಿಕ್ಕಿದೆ ಎಂದು ಹೇಳಿದ್ದಾರೆ.
PublicNext
26/11/2024 06:37 pm