ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ : ಆಟೋದಲ್ಲಿ ಬಿಟ್ಟೋದ ನಗದು,ಮೊಬೈಲ್ ಹಿಂತಿರುಗಿಸಿದ ಪೊಲೀಸ್

ದಾವಣಗೆರೆ : ₹ 1,50,000 ಮೌಲ್ಯದ ಆಭರಣ ಹಾಗೂ ಮೊಬೈಲ್‌ ಅನ್ನು ಆಟೋದಲ್ಲೇ ಬಿಟ್ಟು ಹೋಗಿದ್ದ ಮಹಿಳೆಗೆ ಪೊಲೀಸರು ಸ್ವತ್ತು ಪತ್ತೆ ಮಾಡಿ, ಮರಳಿಸಿದ್ದಾರೆ.

ನವೆಂಬರ್ 20ರಂದು ಜಗಳೂರು ತಾಲ್ಲೂಕಿನ ಸಿದ್ದಯ್ಯನ ಕೋಟೆ ನಿವಾಸಿ ಅಂಜುಬಾನು ಅವರು ನಗರದಲ್ಲಿ ಸಂಚರಿಸುವಾಗ ಆಭರಣ, ನಗದು ಹಾಗೂ ಮೊಬೈಲ್‌ ಅನ್ನು ಆಟೊದಲ್ಲೇ ಬಿಟ್ಟುಹೋಗಿದ್ದರು. ಆ ಬಳಿಕ ಬಸವನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಪೊಲೀಸ್ ಇನ್‌ಸ್ಪೆಕ್ಟರ್‌ ಲಕ್ಷ್ಮಣನಾಯ್ಕ ನೇತೃತ್ವದ ತಂಡವು ದಾವಣಗೆರೆ ಪೊಲೀಸ್ ಕಮಾಂಡ್ ಸೆಂಟರ್ ಸಿಬ್ಬಂದಿಯ ನೆರವಿನಿಂದ ಆಟೊ ಹಾಗೂ ಚಾಲಕನನ್ನು ಪತ್ತೆ ಹಚ್ಚಿ ಸ್ವತ್ತನ್ನು ವಶಪಡಿಸಿಕೊಂಡಿದೆ. ವಾರಸುದಾರರಾದ ಅಂಜುಬಾನು ಅವರಿಗೆ ಬಸವನಗರ ಪೊಲೀಸ್ ಠಾಣೆಯಲ್ಲಿ ಹಸ್ತಾಂತರಿಸಲಾಯಿತು.

Edited By : Nirmala Aralikatti
Kshetra Samachara

Kshetra Samachara

24/11/2024 07:59 pm

Cinque Terre

3.9 K

Cinque Terre

0