ದಾವಣಗೆರೆ : 2A ಮೀಸಲಾತಿ ಪಡೆಯುವ ಸಲುವಾಗಿ ಡಿಸೆಂಬರ್ 10 ರಂದು ಬೆಳಗಾವಿ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲಾಗುವು ಎಂದು
ಕೂಡಲಸಂಗಮ ಪೀಠದ ಬಸವಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 2A ಮೀಸಲಾತಿ ಪಡೆಯುವ ಸಲುವಾಗಿ ನಿರಂತರ ಹೋರಾಟ ಮಾಡಿದ್ದೇವೆ. ಇಷ್ಟಲಿಂಗ ಪೂಜೆ ಮೂಲಕ ಹೋರಾಟ ಮಾಡಿದ್ದೇವೆ ಆದರೆ ರಾಜ್ಯ ಸರ್ಕಾರ ಯಾವುದಕ್ಕೂ ಸ್ಪಂದಿಸಿಲ್ಲ ಎಂದರು.
ಸಿಎಂ ಸಿದ್ದರಾಮಯ್ಯನವ್ರು ಉಪ ಚುನಾವಣೆ ನೆಪ ಮಾಡಿ ಮೀಸಲಾತಿ ವಿಚಾರ ಸಭೆ ಕರಿಯೋದು ಮುಂದೆ ಹಾಕಿದ್ದರು. ತದನಂತರ ಮತ್ತೆ ಯಾವುದೇ ಪ್ರತಿಕ್ರಿಯೆ ಸರ್ಕಾರದ ಕಡೆಯಿಂದ ಬಂದಿಲ್ಲ, ಡಿಸೆಂಬರ್ 10 ರಂದು ಬೆಳಗಾವಿ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಚ್ಚರಿಕೆ ನೀಡಿದರು.
ಪಕ್ಷಾತೀತವಾಗಿ ಎಲ್ಲರೂ ಬೆಂಬಲ ನೀಡಬೇಕು ಎಂದು ಶ್ರೀಗಳು ಮನವಿ ಮಾಡಿದ್ದಾರೆ. ಸಿದ್ದರಾಮಯ್ಯನವರಿಗೆ ನಮ್ಮ ಸಮಾಜದ ಬಗ್ಗೆ ಕಳಕಳಿ ಇದೆಯೋ ಇಲ್ಲ ಅನ್ನೋದು ಗೊತ್ತಾಗ್ತಿಲ್ಲ,ಸರ್ಕಾರ ಬರೋಕೆ ನಮ್ಮ ಸಮುದಾಯವು ಕಾರಣ ಇದೆ. ಹಾಗಾಗಿ ನಮ್ಮ ಸಮುದಾಯಕ್ಕೆ ಸಹಕಾರಿಯಾಗಬೇಕು ನಮ್ಮ ಹೋರಾಟಕ್ಕೆ ಬರುವ ಯಾವುದೇ ವಾಹನಗಳನ್ನ ತಡಿಯೋ ಕೆಲಸ ಮಾಡಬೇಡಿ ಎಂದು ಹೇಳಿದರು.
PublicNext
27/11/2024 07:10 pm