ಮುಲ್ಕಿ : ಅತಿಕಾರಿಬೆಟ್ಟು ಗ್ರಾಮ ಪಂಚಾಯಿತಿಯ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆ ಹಾಗೂ 15ನೇ ಹಣಕಾಸು ಯೋಜನೆಯ ಸಾಮಾಜಿಕ ಲೆಕ್ಕಪರಿಶೋಧನಾ ಸಭೆಯನ್ನು ನಡೆಸಲಾಯಿತು. ಅರಣ್ಯ ಅಧಿಕಾರಿ ಜಯಪ್ರಕಾಶ್ ಅಧ್ಯಕ್ಷತೆ ವಹಿಸಿ ಮಾತನಾಡಿ ಪಾರದರ್ಶಕ ಕಾಮಗಾರಿಗಳ ಪರಿಶೀಲನೆಗೆ ಗ್ರಾಮ ಸಭೆಯು ಪೂರಕ ಎಂದು ಹೇಳಿದ್ದರು .
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಉಪಾಧ್ಯಕ್ಷ ಮನೋಹರ್ ಕೋಟ್ಯಾನ್, ಸದಸ್ಯರಾದ ಜಯಕುಮಾರ್, ಸುಧಾಕರ್ ಶೆಟ್ಟಿ, ಗೀತಾ, ಪದ್ಮಿನಿ ಶೆಟ್ಟಿ ಜ್ಯೋತಿ ಆಚಾರ್ಯ, ಅಭಿವೃದ್ಧಿ ಅಧಿಕಾರಿ ಶೈಲಜಾ ಕಾರ್ಯದರ್ಶಿ ಮಂಜುನಾಥ್ ನರೇಗಾ ಇಂಜಿನಿಯರ್ ರುತೇಶ್ ಮತ್ತು ನರೇಗಾ ಫಲಾನುಭವಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು
Kshetra Samachara
14/11/2024 03:38 pm