ಮುಲ್ಕಿ: ಪಕ್ಷಿಕೆರೆ ಕೊಲೆ ಪ್ರಕರಣ ಹಾಗೂ ಕಾರ್ತಿಕ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಪೊಲೀಸರು ತಲೆ ಬಿಸಿಯಾಗಿದೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ತಿಕ್ ಆತ್ಮಹತ್ಯೆ ಬಳಿಕ ಆತನಿಂದ ಮೋಸ ಹೋಗಿದ್ದ ಪಕ್ಷಿಕೆರೆ ನಿವಾಸಿ ಮಹಮ್ಮದ್ ರವರು ಸುರತ್ಕಲ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಈ ಸಂದರ್ಭ ಕಾರ್ತಿಕ್ ಕೆಲಸ ಮಾಡುತ್ತಿದ್ದ ಬ್ಯಾಂಕ್ ಅಧಿಕಾರಿಗಳನ್ನು ಕರೆದು ಪೊಲೀಸರು ತನಿಖೆ ನಡೆಸಿದ್ದಾರೆ. ಕಾರ್ತಿಕ್‌ಗೆ ಸಂಬಂಧಿಸಿದ ಇನ್ನೊಂದು ಪ್ರಕರಣದ ಬಗ್ಗೆ ನಾಳೆ ಮತ್ತೊಬ್ಬರು ದೂರು ನೀಡುವ ಸಾಧ್ಯತೆ ಇದೆ.
ಈ ಮಧ್ಯೆ ಮುಲ್ಕಿ ಪೊಲೀಸರು ಕಾರ್ತಿಕ್ ಮನೆಯವರು ಮತ್ತು ಪ್ರಿಯಾಂಕ ಮನೆಯವರ ಜೊತೆ ಕೊಲೆ ನಡೆದ ಪಕ್ಷಿಕೆರೆ ಅಪಾರ್ಟ್ಮೆಂಟ್ ರೂಮ್‌ನ ಸ್ಥಳ ಮಹಜರು ನಡೆಸಿದ್ದಾರೆ. ಕೊಲೆ ಮತ್ತು ಆತ್ಮಹತ್ಯೆಗೆ ಸಂಬಂಧಿಸಿದಂತೆ ಕಾರ್ತಿಕ್ ಭಟ್ ತೆರಳುವ ದೃಶ್ಯ ಪಡುಪಣಂಬೂರು ಕಲ್ಲಾಪು ದೇವಸ್ಥಾನದ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ತನ್ನ ದ್ವಿಚಕ್ರ ವಾಹನವನ್ನು ಮಹಮ್ಮಾಯಿ ದೇವಸ್ಥಾನದ ಮುಂಭಾಗ ಅಶ್ವಥ ಮರದ ಕಟ್ಟೆ ಳಿ ಇರಿಸುತ್ತಾನೆ. ತನ್ನ ಬಲ ಭಾಗದ ಕೈಗೆ ಬಿಳಿ ವಸ್ತ್ರವನ್ನು ಸುತ್ತಿದ್ದು, ಪತ್ನಿ ಮತ್ತು ಮಗುವನ್ನು ಕೊಲೆ ಮಾಡುವ ಸಂದರ್ಭ ಗಾಜು ತನ್ನ ಕೈಗೆ ತಾಗಿದ್ದ ಕಾರಣಕ್ಕಾಗಿಯೇ ಕಾರ್ತಿಕ್ ತನ್ನ ಕೈಗೆ ಬಟ್ಟೆ ಕಟ್ಟಿದ್ದು ಎನ್ನಲಾಗಿದೆ. ರೈಲ್ವೆ ಹಳಿಯ ಕಡೆಗೆ ಆತ್ಮಹತ್ಯೆಗೆ ತೆರಳುವ ದೃಶ್ಯವು ಸದ್ಯ ಸೆರೆಯಾಗಿದೆ.
PublicNext
14/11/2024 07:51 am