ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಪೊಲೀಸ್ ಠಾಣೆಗೆ ಜಿಲ್ಲಾ ಹಿರಿಯ ನ್ಯಾಯಾಧೀಶರ ದಿಢೀರ್ ಭೇಟಿ - ಕಡತಗಳ ಪರಿಶೀಲನೆ

ಮುಲ್ಕಿ: ದಕ್ಷಿಣ ಕನ್ನಡ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಿರಿಯ ನ್ಯಾಯಾಧೀಶೆ ಶೋಭಾ ಬಿಜೆ ರವರು ಮುಲ್ಕಿ ಪೊಲೀಸ್ ಠಾಣೆಗೆ ದಿಢೀರ್ ಭೇಟಿ ನೀಡಿ ಪೋಲಿಸ್ ಠಾಣೆಯ ಸಿಬ್ಬಂದಿ ಕಾರ್ಯವೈಖರಿ ಹಾಗೂ ಕಡತಗಳ ಪರಿಶೀಲನೆ ನಡೆಸಿದರು.

ಇದೇ ಸಂದರ್ಭದಲ್ಲಿ ನ್ಯಾಯಾಧೀಶರು ಠಾಣೆಗೆ ದೂರು ನೀಡಲು ಬರುವವರಿಗೆ ಹೊರಗಡೆ ಕುಳಿತುಕೊಳ್ಳಿರಿಸುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಹಾಗೂ ಠಾಣೆಯ ಎದುರು ಭಾಗದಲ್ಲಿ ಸಮರ್ಪಕ ನಾಮಫಲಕ ಅಳವಡಿಸಲು ಸೂಚನೆ ನೀಡಿದರು.

ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಅತಿ ಸೂಕ್ಷ್ಮ ಪ್ರದೇಶವಾದ ಕೆಎಸ್ ರಾವ್ ನಗರದ ಲಿಂಗಪ್ಪಯ್ಯ ಕಾಡು ಪ್ರದೇಶದಲ್ಲಿ ಗಾಂಜಾ, ಡ್ರಗ್ಸ್ ಹಾಗೂ ಅಪರಾಧ ಪ್ರಕರಣಗಳು ವಿಪರೀತವಾಗುತ್ತಿದ್ದು ನಿಯಂತ್ರಿಸಬೇಕು. ಜನರಿಗೆ ಪೋಸ್ಕೋ ಕಾಯ್ದೆ ಬಗ್ಗೆ ಮಾಹಿತಿ ನೀಡಬೇಕು, ಅಪರಾಧಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಹಾಗೂ ಕೆ ಎಸ್ ರವರ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಕಾನೂನು ಮಾಹಿತಿ ಶೀಘ್ರ ನಡೆಸಬೇಕು ಎಂದು ಸೂಚನೆ ನೀಡಿದರು.

ಇದೇ ಸಂದರ್ಭ ಸ್ಥಳೀಯರು ಠಾಣೆಗೆ ನೂತನ ಗಸ್ತು ವಾಹನ ಹಾಗೂ ಮುಲ್ಕಿ ತಾಲೂಕಿಗೆ ನೂತನ ನ್ಯಾಯಾಲಯ ಸ್ಥಾಪನೆಗೆ ನ್ಯಾಯಾಧೀಶರ ಬಳಿ ಮನವಿ ಮಾಡಿದರು.

ಈ ಸಂದರ್ಭ ಎಸ್ಐ ಅನಿತಾ, ಜಿಲ್ಲಾ ಕಾನೂನು ನೆರವು ಕೇಂದ್ರದ ಸಲಹೆಗಾರ ಮಂಜುನಾಥ ಆರ್ ಕೆ, ವಕೀಲರಾದ ಶಶಿಕುಮಾರ್ ಕೆಎಸ್ ರಾವ್ ನಗರ, ಮುಲ್ಕಿ ಠಾಣೆಯ ಎ ಎಸ್ ಐ ಉಮೇಶ್, ಸಂಜೀವ ಮತ್ತಿತರರು ಇದ್ದರು.

Edited By : Manjunath H D
PublicNext

PublicNext

13/11/2024 10:36 pm

Cinque Terre

39.25 K

Cinque Terre

0

ಸಂಬಂಧಿತ ಸುದ್ದಿ