ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರ್ಕಳ : ಮನೆಯೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಲಕ್ಷಾಂತರ ಮೌಲ್ಯದ ಗೋವಾ ಮದ್ಯ ವಶಕ್ಕೆ - 'ಕೈ' ಮುಖಂಡ ಪರಾರಿ ?!

ಕಾರ್ಕಳ : ಕಾರ್ಕಳ ತಾಲೂಕಿನ ಬೋಳ ಎಂಬಲ್ಲಿ ಅಬಕಾರಿ ಅಧಿಕಾರಿಗಳು ದಿಢೀರ್‌ ದಾಳಿ ನಡೆಸಿ ಮನೆಯೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಲಕ್ಷಾಂತರ ಮೌಲ್ಯದ ಮದ್ಯದ ಬಾಕ್ಸ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಕಾರ್ಯಾಚರಣೆ ವೇಳೆ ಲಕ್ಷಾಂತರ ರೂ. ಮೌಲ್ಯದ ಸುಮಾರು 260ಕ್ಕೂ ಅಧಿಕ ಮದ್ಯದ ಬಾಕ್ಸ್‌ಗಳು ಪತ್ತೆಯಾಗಿವೆ.

ಅಬಕಾರಿ ಅಧಿಕಾರಿಗಳು ಅದನ್ನು ಜಪ್ತಿ ಮಾಡಿ ಕಾರ್ಕಳ ಅಬಕಾರಿ ಇಲಾಖೆಯಲ್ಲಿ ದಾಸ್ತಾನಿರಿಸಿದ್ದಾರೆ. ಇವೆಲ್ಲವೂ ಬ್ರ್ಯಾಂಡೆಡ್‌ ಮಾಲುಗಳಾದ ಜಾನಿ ವಾಕರ್‌, ಬ್ಲಾಕ್‌ ಲೇಬಲ್‌, ಬ್ಲ್ಯಾಕ್‌ ಆಂಡ್‌ ವೈಟ್‌, ಮ್ಯಾನ್ಶನ್‌ ಹೌಸ್ (MH), ಮ್ಯಾಕ್‌ಡ್ವೆಲ್‌ (MC), ಓಡ್ಕ ಲೇಬಲ್‌ನ ನಕಲಿ ಮದ್ಯವಾಗಿದೆ. ಆರೋಪಿಗಳು ಪರಾರಿಯಾಗಿದ್ದು, ಅಬಕಾರಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ.

ಈ ವ್ಯವಹಾರದ ಹಿಂದೆ ಅವಿನಾಶ್ ಮಲ್ಲಿ ಎಂಬಾತ ಇದ್ದು ಈತ ಕಾರ್ಕಳ ಕಾಂಗ್ರೆಸ್ ಮುಖಂಡ ಎನ್ನಲಾಗಿದೆ. ಆರೋಪಿಗಳ ಪತ್ತೆಗಾಗಿ ಮತ್ತು ನಕಲಿ ಮದ್ಯ ತಯಾರಿಕೆ, ರವಾನೆ‌ ಹೇಗೆ ನಡೆಯುತ್ತಿದೆ ಎನ್ನುವುದರ ಕುರಿತು ಉಡುಪಿ ಜಿಲ್ಲಾ ಅಬಕಾರಿ ಉಪ ಆಯುಕ್ತೆ ಬಿಂದುಶ್ರೀ ತಂಡ ತನಿಖೆ ನಡೆಸುತ್ತಿದೆ.

Edited By : Suman K
PublicNext

PublicNext

14/11/2024 04:04 pm

Cinque Terre

23.21 K

Cinque Terre

2

ಸಂಬಂಧಿತ ಸುದ್ದಿ