ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ವಿಟ್ಲ : ಕಂದಾಯ ನಿರೀಕ್ಷಕರ ಕಚೇರಿಯಲ್ಲಿದಾಂಧಲೆ - ಇಬ್ಬರ ವಿರುದ್ದ ಪ್ರಕರಣ

ವಿಟ್ಲ : ಇಲ್ಲಿನ ಕಂದಾಯ ನಿರೀಕ್ಷಕರ ಕಚೇರಿಯಲ್ಲಿ ದಾಂಧಲೆ ನಡೆಸಿದ ಆರೋಪದಲ್ಲಿ ಇಬ್ಬರ ವಿರುದ್ಧ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವೀರಕಂಬ ಗ್ರಾಮದ ನಿವಾಸಿ ಹರೀಶ್ ರೈ ಕಲ್ಮಲೆ, ಧನಂಜಯ ವಿರುದ್ಧ ಪ್ರಕರಣ ದಾಖಲಾಗಿದೆ. ವೀರಕಂಬ ಗ್ರಾಮದ ನೆಕ್ಕಿಲಾರು ನಿವಾಸಿ ಶೇಖ್ ಸುಬಾನ್ ಅವರ 94ಸಿ ಮನೆ ನಿವೇಶನದ ಮಂಜೂರಾತಿಗೆ ಸಂಬಂಧಿಸಿ ಮಾತುಕತೆ ನಡೆಸಲು ಆರ್.ಐ.ಕಚೇರಿಗೆ ಇವರಿಬ್ಬರೂ ರಾಜಕಾರಣಿಯೊಂದಿಗೆ ಆಗಮಿಸಿದ್ದರು.

ಈ ಸಂಬಂಧ ಮಾತಿಗೆ ಮಾತು ಬೆಳೆದು ದಾಂಧಲೆ ನಡೆಸಿದ್ದು, ಆರೋಪಿಗಳ ವಿರುದ್ಧ ಅವಾಚ್ಯವಾಗಿ ನಿಂದಿನೆ, ಜೀವ ಬೆದರಿಕೆ ಹಾಕಿ, ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ ಹೊರಿಸಲಾಗಿದೆ. ಕಚೇರಿಯ ಮೇಜಿನ ಮೇಲಿದ್ದ ಗಾಜನ್ನು ಒಡೆದ ಕಾರಣ 7 ಸಾ. ರೂ. ನಷ್ಟ ಉಂಟಾಗಿರುವುದಾಗಿ ಕಂದಾಯ ನಿರೀಕ್ಷಕ ಎ. ಪ್ರಶಾಂತ ಶೆಟ್ಟಿ ದೂರಿನಲ್ಲಿ ತಿಳಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

14/11/2024 10:24 pm

Cinque Terre

678

Cinque Terre

0

ಸಂಬಂಧಿತ ಸುದ್ದಿ