ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪರಶುರಾಮ ಥೀಮ್‌ ಪಾರ್ಕ್‌ ಪೂರ್ಣಗೊಳಿಸಲು ಕಾಂಗ್ರೆಸಿಗರಿಂದ ಅಡ್ಡಗಾಲು - ಸುನಿಲ್ ಕುಮಾರ್ ಆರೋಪ

ಉಡುಪಿ : ಸರಕಾರಿ ಕಾಮಗಾರಿ ಪೂರ್ಣಗೊಂಡು ಸಂಬಂಧಪಟ್ಟ ಇಲಾಖೆಗೆ ಹಸ್ತಾಂತರಗೊಳ್ಳುವ ಮೊದಲೇ ತನಿಖೆಗೆ ಒಪ್ಪಿಸಿರುವುದು ಪರಶುರಾಮ ಥೀಮ್‌ ಪಾರ್ಕ್‌ ಪ್ರಕರಣ ಮಾತ್ರ. ಕಾಂಗ್ರೆಸ್‌ ಕಚೇರಿಯಲ್ಲಿ ಸೃಷ್ಟಿಯಾಗಿರುವ ಪ್ರಶ್ನೆಗಳನ್ನೇ ಮುಂದಿಟ್ಟುಕೊಂಡು ಪೊಲೀಸರು ಈ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಪ್ರವಾಸೋದ್ಯಮ ಅಭಿವೃದ್ಧಿ ವಿರೋಧಿಸುವ ಕಾಂಗ್ರೆಸ್‌ ಪರಶುರಾಮ ಥೀಮ್‌ ಪಾರ್ಕ್‌ ಪೂರ್ಣಗೊಳಿಸಲು ಅಡ್ಡಗಾಲು ಹಾಕುತ್ತಿದೆ ಎಂದು ಶಾಸಕ ವಿ. ಸುನಿಲ್‌ ಕುಮಾರ್‌ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಖಾಸಗಿ ವ್ಯಕ್ತಿ ನೀಡಿದ ದೂರಿನ ಆಧಾರದಲ್ಲಿ ಸರಕಾರಿ ಕಾಮಗಾರಿಯೊಂದರ ಕುರಿತು ಎಫ್ಐಆರ್‌ ಹಾಕಿ, ತನಿಖೆ ನಡೆಸುತ್ತಿರುವ ಹೊಸ ಸಂಪ್ರದಾಯ ಹುಟ್ಟಿಕೊಂಡಿದೆ. ಮುಂದೆ ಲೋಕೋಪಯೋಗಿ ಇಲಾಖೆಯ ಕಾಮಗಾರಿಗಳಿಗೂ ಈ ರೀತಿಯ ಖಾಸಗಿ ದೂರುಗಳು ದಾಖಲಾಗಬಹುದು. ಕೊಲೆ ಆರೋಪಿಯನ್ನು ಮೂರು ದಿನ ಪೊಲೀಸ್‌ ಕಸ್ಟಡಿಯಲ್ಲಿಟ್ಟುಕೊಂಡು ವಿಚಾರಣೆ ನಡೆಸುವ ಪೊಲೀಸರು, ಪರಶುರಾಮ ಮೂರ್ತಿಯ ಶಿಲ್ಪಿಯನ್ನು 7 ದಿನ ಯಾಕೆ ಕಸ್ಟಡಿಯಲ್ಲಿ ಇಟ್ಟುಕೊಂಡಿದ್ದಾರೆ ಎಂಬುದು ಎಲ್ಲರಿಗೂ ತಿಳಿಯುತ್ತಿದೆ ಎಂದರು.

ಮೂರ್ತಿಯ ವಿನ್ಯಾಸ ಬದಲಿಸಲು ಜಿಲ್ಲಾಡಳಿತವೇ ಒಪ್ಪಿಗೆ ನೀಡಿದ್ದು, ಪೊಲೀಸರ ಭದ್ರತೆಯಲ್ಲೇ ಮೂರ್ತಿಯ ಮೇಲ್ಭಾಗವನ್ನು ಬದಲಾವಣೆಗೆ ಕೊಂಡೊಯ್ಯಲಾಗಿದೆ. ವಾಸ್ತವ ಗೊತ್ತಿದ್ದೂ ಅಭಿವೃದ್ಧಿ ಕಾರ್ಯಕ್ಕೆ ಕಾಂಗ್ರೆಸ್‌ ಅಡ್ಡಿಪಡಿಸುತ್ತಿದೆ ಎಂದು ದೂರಿದರು.

Edited By : Suman K
PublicNext

PublicNext

14/11/2024 03:35 pm

Cinque Terre

19.97 K

Cinque Terre

1

ಸಂಬಂಧಿತ ಸುದ್ದಿ