ಕಾರ್ಕಳ : ಖಾಸಗಿ ಬಸ್ಸುಗಳೇ ಹೆಚ್ಚಾಗಿ ಓಡಾಟ ನಡೆಸುವ ಉಡುಪಿ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಸರ್ಕಾರಿ ಬಸ್ಸುಗಳಿಗೆ ಬೇಡಿಕೆ ಹೆಚ್ಚಿದೆ.ಕರ್ನಾಟಕ ಸರಕಾದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಮಹಿಳೆಯರ ಉಚಿತ ಪ್ರಯಾಣದ ಶಕ್ತಿ ಯೋಜನೆಯ ಬಸ್ಸನ್ನು ಆರಂಭಿಸುವಂತೆ ಗ್ರಾಮೀಣ ಭಾಗಗಳಲ್ಲಿ ಒತ್ತಾಯ ಹೆಚ್ಚುತ್ತಿದೆ.
ಇದೀಗ ಪಳ್ಳಿ- ನಿಂಜೂರು ರಸ್ತೆಯಲ್ಲಿ ಸರ್ಕಾರಿ ಬಸ್ ಸಂಚಾರ ಆರಂಭವಾಗಿದೆ.ಪಳ್ಳಿ ಗ್ರಾಮಸ್ಥರು ಬಸ್ಸಿಗೆ ಪೂಜೆ ಸಲ್ಲಿಸಿಸುವುದರ ಮೂಲಕ ಸ್ವಾಗತಿಸಿದರು. ಪಳ್ಳಿ ವೃತ್ತದಲ್ಲಿ ಮೊದಲೇ ಸೇರಿದ್ದ ಗ್ರಾಮಸ್ಥರು ಬಸ್ ಬಂದು ನಿಲ್ಲುತ್ತಿದ್ದಂತೆ ಬಾಳೆ ಗಿಡ ಹಾಗೂ ಹೂವಿನ ಮಾಲೆಗಳಿಂದ ಬಸ್ಸನ್ನು ಶೃಂಗಾರ ಮಾಡಿ ಅರ್ಚಕರ ಮೂಲಕ ಆರತಿ ಬೆಳಗಿ ಪ್ರಾರ್ಥನೆ ಸಲ್ಲಿಸಿದರು.
ಸರಕಾರಕ್ಕೆ ಜೈಕಾರ ಹಾಕಿ ಸಂಭ್ರಮಿಸಿದರು. ಉಡುಪಿ ಮೂಡುಬೆಳ್ಳೆ ಪಳ್ಳಿ ಮಾರ್ಗವಾಗಿ ಕಾರ್ಕಳಕ್ಕೆ ಹೋಗುವ ನೂರಾರು ಪ್ರಯಾಣಿಕರಿಗೆ ಇದರಿಂದ ಅನುಕೂಲವಾಗಲಿದೆ.
PublicNext
13/11/2024 07:07 pm